ಎರಡು ಬೋರ್‌ವೆಲ್ ಹಾಳು ಮಾಡಿದ ಕಿಡಿಗೇಡಿಗಳು

161220 Hanumasagara Borewell Waste
ಹನುಮಸಾಗರ ಸಮೀಪದ ನರಸಾಪುರ ಗ್ರಾಮದ ರೈತ ಹೇಮಪ್ಪ ಶರಣಪ್ಪ ವಾರಿಕಲ್ ಅವರ ಹೊಲದಲ್ಲಿನ ಬೋರ್‌ವೆಲ್‌ಗಳನ್ನು ಕಿಡಿಗೇಡಿಗಳು ಹಾಳು ಮಾಡಿರುವುದು.
Published on

ಹನುಮಸಾಗರ: ಸಮೀಪದ ನರಸಾಪುರ ಗ್ರಾಮದ ಹೇಮಪ್ಪ ಶರಣಪ್ಪ ವಾರಿಕಲ್ ಎಂಬುವರ ಜಮೀನಿನಲ್ಲಿನ ಎರಡು ಬೋರ್‌ವೆಲ್‌ಗಳನ್ನು ಯಾರೋ ಕಿಡಿಗೇಡಿಗಳು ಸೋಮವಾರ ರಾತ್ರಿ ಹಾಳು ಮಾಡಿದ್ದಾರೆ.

ಹೊಲದಲ್ಲಿಯ ಒಂದು ಬೋರ್‌ವೆಲ್‌ನ ಎಲ್ಲ ಸಾಮಗ್ರಿಗಳನ್ನು ಹಾಗೂ ಎಂಟು ಪೈಪ್ ಸಮೇತ ಬಿಚ್ಚಿ ಕೊಳವೆ ಬಾವಿಗೆ ಬಿಟ್ಟಿದ್ದಾರೆ. ಇನ್ನೊಂದು ಬೋರ್‌ವೆಲ್‌ನ ಕ್ಯಾಪ್ ಬಿಚ್ಚಿ, ಕೊಳವೆಬಾವಿಗೆ ಕಲ್ಲು ತುಂಬಿದ್ದಾರೆ. ರೈತ ಹೇಮಪ್ಪ ಸದ್ಯ ತನ್ನ ಹೊಲದಲ್ಲಿ 8 ಕ್ವಿಂಟಾಲ್ ಶೇಂಗಾ ಬಿತ್ತನೆ ಮಾಡಿದ್ದು, ಬೆಳೆ ಉತ್ತಮವಾಗಿ ಬಂದಿದೆ. ಕಿಡಿಗೇಡಿಗಳು ಬೋರ್‌ವೆಲ್ ಹಾಳು ಮಾಡಿದ್ದರಿಂದ ಬೆಳೆ ಒಣಗುವ ಭೀತಿ ಎದುರಾಗಿದೆ. ಮಂಗಳವಾರ ಬೆಳಗ್ಗೆಯಿಂದ ಅನೇಕ ರೈತರು ಹೇಮಪ್ಪನ ಹೊಲಕ್ಕೆ ಬಂದು ಬೋರ್‌ವೆಲ್ ನೋಡಿ, ಕಿಡಿಗೇಡಿಗಳು ಮಾಡಿರುವ ಕೃತ್ಯ ಕಂಡು ಹಿಡಿಶಾಪ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net