ಹಾವು ಕಚ್ಚಿ ತುಮರಿಕೊಪ್ಪ ಗ್ರಾಮದ ರೈತ ಸಾವು

07082020 Hanumasagar Farmer death
Published on

ಹನುಮಸಾಗರ: ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಹಾವು ಕಚ್ಚಿ ರೈತ ಕಳಕಪ್ಪ ಯಮನಪ್ಪ ಬಿಳಗಿ(35) ಮೃತ ಪಟ್ಟಿದ್ದಾರೆ. ತಮ್ಮ ಹೆಸರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ತಕ್ಷಣ ಚಿಕಿತ್ಸೆಗೆ ಕುಷ್ಟಗಿ ತಾಲೂಕು ಆಶ್ಪತ್ರೆಗೆ ಕರೆದೊಯಲ್ಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲಿಸಲಾಗಿತ್ತು. ಚಿಕತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಸಾವನಪ್ಪಿದ್ದಾರೆ. ಮೃತರಿಗೆ ತಂದೆ, ತಾಯಿ, ಪತಿ, ಇಬ್ಬರು ಸಹೋದರರು, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಹನುಮಂತ ಸಂಶಿ ಭೇಟಿ ನೀಡಿ ಪರಿಶೀಲಿಸಿದ್ದು, ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net