

ಹನುಮಸಾಗರ: ಸೀಗೆ ಹುಣ್ಣಿಮೆ ನಿಮಿತ್ತ ಪಟ್ಟಣದ 13ನೇ ವಾರ್ಡ್‌ನ ಆಶ್ರಯ ಕಾಲನಿ ಹಾಗೂ ವಿದ್ಯಾನಗರದಲ್ಲಿ ಶುಕ್ರವಾರ ರಾತ್ರಿ ಮುತ್ತೈದೆಯರು ಸೀಗಮ್ಮಗೆ ಸಕ್ಕರೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಮಹಿಳೆಯರು, ಮಕ್ಕಳು ಸೀಗೆ ಹುಣ್ಣಿಮೆಯಂದು ಗ್ರಾಮ ಅಥವಾ ವಾರ್ಡ್‌ನ ಒಂದು ಕಡೆ ಸೀಗಮ್ಮನ ಮೂರ್ತಿ ಪ್ರತಿಷ್ಠಾಪಿಸಿ, ಆರತಿ ಮಾಡುವುದು ಬಹುಕಾಲದಿಂದ ನಡೆದುಕೊಂಡ ಬಂದ ಪದ್ಧತಿ. ಕೆಜಿ ಆರತಿಗೆ 100 ರೂ. ನೀಡಿ ಮಹಿಳೆಯರು ಆರತಿ ಖರೀದಿಸಿ ಸೀಗಮ್ಮಗೆ ಬೆಳಗಿದರು. ಮಕ್ಕಳು ಹೊಸ ಸೀರಿ ಧರಿಸಿ, ಹೂ ಮುಡಿದು ಆರತಿ ಮಾಡಲು ತಾಮುಂದು ನಾಮುಂದು ಎಂದು ತೆರಳುವ ದೃಶ್ಯ ಕಂಡು ಬಂತು. ವಿದ್ಯಾನಗರದಲ್ಲಿ ಪ್ರತಿಷ್ಠಾಪಿಸಿದ ಸೀಗಮ್ಮನ ಮೂರ್ತಿಗೆ ಗ್ರಾಪಂ ಸದಸ್ಯೆ ಬಸಮ್ಮ ಹಿರೇಮಠ, ಶ್ರೀದೇವಿ ಹಿರೇಮಠ, ನೇತ್ರಾ ನಡುವಿನಮಠ, ರೂಪ ನಡುವಿನ ಮಠ, ಮಹಾದೇವಿ, ಭಾಗ್ಯಶ್ರೀ, ಗೌರಮ್ಮ, ಅಕ್ಕಮಹಾದೇವಿ, ತೇಜು ಸಜ್ಜನ ಇತರರು ಆರತಿ ಬೆಳಗಿದರು.