ಗುರು, ಹಿರಿಯರನ್ನು ಗೌರವಿಸಿ- ಮದ್ದಾನೇಶ್ವರ ಹಿರೇಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹಿತೋಪದೇಶ

201221 Shadalageri Maddaneshwara Swamiji Honor
ಹನುಮಸಾಗರ ಸಮೀಪದ ಶಾಡಲಗೇರಿ ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವಲ್ಲಿ ಭಾನುವಾರ ಕರಿಬಸವ ಶಿವಾಚಾರ್ಯ ಸ್ವಾಮೀಜಿಗೆ ತುಲಾಭಾರ ಮಾಡಿ ಶಿವಾಚಾರ್ಯ ರತ್ನ ಪ್ರಶಸ್ತಿ ನೀಡಲಾಯಿತು.
Published on

ಹನುಮಸಾಗರ: ತಂದೆ, ತಾಯಿ ಹಾಗೂ ಗುರು, ಹಿರಿಯರನ್ನು ಗೌರದಿಂದ ಕಾಣುವ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಕುಷ್ಟಗಿ ಮದ್ದಾನೇಶ್ವರ ಹಿರೇಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶಾಡಲಗೇರಿ ಗ್ರಾಮದಲ್ಲಿ ಭಾನುವಾರ ಶರಣಬಸವೇಶ್ವರ ದೇವಸ್ಥಾನ ಉದ್ಘಾಟನೆ, ಸಾಮೂಹಿಕ ವಿವಾಹ ಸಮಾರಂಭದಲ್ಲಿ ತುಲಾಭಾರ ಮತ್ತು ಶಿವಾಚಾರ್ಯ ರತ್ನ ಪ್ರಶಸ್ತಿ ಸ್ವೀಕರಿಸಿ ಆಶೀರ್ವಚನ ನೀಡಿದರು. ಎಲ್ಲರಿಗೂ ಮುಪ್ಪು ಬರುತ್ತದೆ. ಇದರಿಂದಾಗಿ ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಭಕ್ತಿಯಿಂದ ದೇವರನ್ನು ಆರಾಧಿಸಿಬೇಕೇ ಹೊರತು ಪುಣ್ಯಸ್ಥಳಗಳನ್ನು ಸುತ್ತಿ ಅಲ್ಲ. ಸುಖ ಸಂಸಾರಕ್ಕೆ ಸತಿ, ಪತಿ ಅರಿತು ಬಾಳಬೇಕು ಎಂದರು.

ವಿರೂಪಾಕ್ಷ ಸ್ವಾಮೀಜಿ, ತೀರ್ಥೇಂದ್ರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಶಿವರಾಜ ಬೆಣ್ಣಿ, ಪ್ರಮುಖರಾದ ದೊಡ್ಡಬಸನಗೌಡ ಪಾಟೀಲ್ ಬಯ್ಯಪುರ, ಅಕ್ಕಮಹಾದೇವಿ ಉಮಾಪತಿ, ಹನುಮಂತಪ್ಪ ಗಟ್ಟಿ, ಮುತ್ತಯ್ಯ ಹಿರೇಮಠ, ಭೀಮಪ್ಪ ವಕ್ರ, ಸಂಗಪ್ಪ ಅಂಗಡಿ, ಶಿವಪ್ಪ ರಡ್ಡೇರ, ವಿರೂಪಾಕ್ಷಪ್ಪ ಗೋನಾಳ, ಗುರುಪಾದಪ್ಪ ಹಡಪದ, ಶರಣಪ್ಪ ಗೌಡ್ರ, ಸಕ್ರಪ್ಪ ಗುಳಗುಳಿ, ಶೇಖಪ್ಪ, ಗಂಗಾಧರ ಮಾಲಗಿತ್ತಿ, ಗುರುರಾಜ ಹಡಪದ, ಬಸವರಾಜ, ಅಯ್ಯಪ್ಪ ನಸಗುನ್ನಿ, ಸಂಗಪ್ಪ ಹಳದೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net