ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ

14022020 Hanumasaga CC Road Visit
Published on

ಹನುಮಸಾಗರ: ಪಟ್ಟಣದ ಕರಿಸಿದ್ದೇಶ್ವರ ಮಠದ ಹತ್ತಿರ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಸ್ಥಳಕ್ಕೆ ಜಿಪಂ ಸದಸ್ಯ ಭೀಮಣ್ಣ ಅಗಸಿಮುಂದಿನ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿ, ವಿವಿಧ ಮನೆಗಳ ನಲ್ಲಿಗಳಿಗೆ ನೀರು ಸರಬರಾಜು ಆಗುವ ಪೈಪ್‌ಲೈನ್‌ಗಳನ್ನು ಬೇಗನೆ ಜೋಡನೆ ಮಾಡಿ ಸಿಸಿ ರಸ್ತೆ ಕಾಮಗಾರಿ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಪಿಡಿಒ ಬಸವರಾಜ ಸಂಗನಾಳಗೆ ತಿಳಿಸಿದರು. ಕಲ್ಯಾಣ ಕರ್ನಾಟಕದ ವಿಶೇಷ ಅಭಿವೃದ್ಧಿಯ 88ಲಕ್ಷ ರೂ. ಅನುದಾನದಲ್ಲಿ ರಾಘವೇಂದ್ರಮಠದಿಂದ ಅಗಸಿವರೆಗೆ 349 ಮೀಟರ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮಾರ್ಚ್ ತಿಂಗಳಲ್ಲಿ ಇಲ್ಲಿ ಪಾಂಡುರಂಗ ವಿಠ್ಠಲ ದೇವಸ್ಥಾನ ಹಾಗೂ ಕರಿಸಿದ್ದೇಶ್ವರ ಮಠದ ಜಾತ್ರೆ ನಡೆಯುತ್ತವೆ. ರಥೋತ್ಸವ ಜರುಗುವುದರಿಂದ ಬೇಗನೆ ಕಾಮಗಾರಿ ಮುಗಿಸಲು ಗುತ್ತಿಗೇದಾರರರಿಗೆ ತಿಳಿಸಲು ಜಿಪಂ ಸದಸ್ಯಗೆ ಸ್ಥಳೀಯರು ಮನವಿ ಮಾಡಿದರು. ಗ್ರಾಪಂ ಸಿಬ್ಬಂದಿ ಮಹಾಂತಯ್ಯ ಕೋಮಾರಿ, ಮಂಗಳೇಶ ಗುಮಗೇರಿ, ಮುಖಂಡರಾದ ಚಂದಪ್ಪ ವಾಲ್ಮೀಕಿ, ಗುರುಪ್ರಸಾದ ಮುಜಮದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net