ಎಲ್ಲೆಡೆ ಹನುಮ ನಾಮ ಸ್ಮರಣೆ

malmaruti (1)
ಹನುಮ ಜಯಂತಿ ನಿಮಿತ್ತ ಶನಿವಾರ ಮಾಳಮಾರುತಿ ಹನುಮಾನ ಮಂದಿರದ ದರ್ಶನಕ್ಕೆ ಸರದಿಯಲ್ಲಿ ಭಕ್ತರು.
Published on

ಬೆಳಗಾವಿ: ನಗರದಲ್ಲಿ ಶನಿವಾರ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಹನುಮಂದಿರಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ವಿಶೇಷ ಪೂಜೆಗಳು ಜರುಗಿದವು. ನಗರದ ಎಲ್ಲ ಹನುಮ ಮಂದಿರಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಪ್ರಮುಖ ದೇವಸ್ಥಾನದ ಆವರಣದಲ್ಲಿ ಪೆಂಡಾಲ್​ ಹಾಕಿ, ಬರುವ ಭಕ್ತರಿಗೆ ನೆರಳು, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆವರೆಗೆ ಭಕ್ತರು ಪ್ರಸಾದ ಸವಿದರು.

ಮಾರುತಿ ಗಲ್ಲಿಯ ಪುರಾತನ ಮಾರುತಿ ಮಂದಿರ, ಮಾಳ ಮಾರತಿಯ ಹನುಮ ಮಂದಿರ, ಬೆಳಗಾವಿ ತಾಲೂಕಿನ ಪಂಥ ಬಾಳೇಕುಂದ್ರಿ ದಕ್ಷಿಣಾಭಿಮುಖಿ ಹನುಮ ಮಂದಿರದಲ್ಲಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು. ಸಂಗೊಳ್ಳಿ ರಾಯಣ್ಣ ವೃತ್ತದ ಹನುಮ ಮಂದಿರ, ನೆಹರು ನಗರ ಮಾರುತಿ ಮಂದಿರ, ರಾಮತೀರ್ಥ ನಗರದ ಹನುಮ ಮಂದಿರಗಳಲ್ಲಿ ಹನುಮ ಜಯಂತಿ ನಿಮಿತ್ತ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಚನ್ನಮ್ಮ ವೃತ್ತದ ಗಣೇಶ ಮಂದಿರದಲ್ಲಿರುವ ಹನುಮ ಮೂರ್ತಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನುಳಿದಂತೆ ವಡಗಾವಿ ಭಾಗದ ಹನುಮ ಮಂದಿರಗಳಲ್ಲೂ ಹನುಮ ಜಂಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net