ಮರಗಳ ಸಂಖ್ಯೆ ಹೆಚ್ಚಿದರೆ ಉತ್ತಮ ಮಳೆ

25062021 Hanumasagar Planting Program
Published on

ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು ಹೇಳಿಕೆ

ಹನುಮಸಾಗರ: ಆರೋಗ್ಯಯುತವಾಗಿ ದೀರ್ಘ ಕಾಲ ಜೀವಿಸಲು ಹೆಚ್ಚು ಗಿಡಗಳನ್ನು ಬೆಳೆಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು ಹೇಳಿದರು.

ಗ್ರಾಮದ ಹೊಸಪೇಟೆ ಲೇಔಟ್ ಉದ್ಯಾನದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಬಲಿದಾನ ದಿನದ ನಿಮಿತ್ತ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಪರಿಸರ ನಾಶದಿಂದ ಉತ್ತಮ ಗಾಳಿ ಹಾಗೂ ಮಳೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಗಿಡ-ಮರಗಳು ಮನುಷ್ಯ ಆರೋಗ್ಯದಿಂದ ಇರಲು ಸಹಾಯ ಮಾಡುತ್ತವೆ. ಗಿಡಗಳು ಹೆಚ್ಚಿದ್ದರೆ ಮಾತ್ರ ಉತ್ತಮ ಮಳೆ ಬರುತ್ತದೆ. ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಅಗತ್ಯವಿದೆ. ಕಾರ್ಯಕರ್ತರು ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಪಂ ಸದಸ್ಯರಾದ ರುದ್ರಗೌಡ ಗೌಡಪ್ಪನವರ, ಬಸವರಾಜ ಹಕ್ಕಿ, ಮರಿಗೌಡ ಬೋದುರು, ಚಂದ್ರಶೇಖರ ಬೆಳಗಲ್, ರಮೇಶ ಬಡಿಗೇರ, ಮುಖಂಡರಾದ ಮುತ್ತಣ್ಣ ಸಂಗಮದ, ಮಂಜುನಾಥ ಕೊಪ್ಪಳ, ಶರಣಪ್ಪ ಬೋದುರು, ಪ್ರಶಾಂತ ಗೋತಗಿ, ಗುರುಸಂಗಪ್ಪ ಮೋಟಗಿ, ವಿರೇಶ ಕಟಗಿ, ಶರಣಪ್ಪ ಮೋಟಗಿ ಹಾಗೂ ಯುವಮಿತ್ರ ಸಂಘದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net