ಸ್ವಾವಲಂಬಿ ಜೀವನಕ್ಕೆ ಹೊಲಿಗೆ ಯಂತ್ರ ಸಹಕಾರಿ

04092021 Hanumasagr Sewing Machine Distribution
Published on

ಹನುಮಸಾಗರ: ಅಂಗವಿಕಲರು ಸ್ವಾವಲಂಬಿಯಾಗಿ ಜೀವನ ನಡೆಸಲು ಹೊಲಿಗೆ ಯಂತ್ರಗಳು ಸಹಾಯಕವಾಗಲಿವೆ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.

ಗ್ರಾಪಂ ಕಚೇರಿಯಲ್ಲಿ ಅಂಗವಿಕಲರ ವಿಶೇಷ ಅನುದಾನದಲ್ಲಿ 47 ಫಲಾನುಭವಿಗಳಿಗೆ ಶುಕ್ರವಾರ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಫಲಾನುಭವಿಗಳು ಹೊಲಿಗೆ ಯಂತ್ರಗಳನ್ನು ಸದ್ಬಳಕೆ ಮಾಡಿಕೊಂಡು ಕುಟುಂಬದ ಮೇಲೆ ಅವಲಂಬಿತರಾಗದೆ ಜೀವನ ನಡೆಸಬೇಕು. ಈ ಮೂಲಕ ಆರ್ಥಿಕರಾಗಿ ಸಬಲರಾಗಿ ಮಾದರಿ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಗ್ರಾಪಂ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಸದಸ್ಯರಾದ ಶ್ರೀಶೈಲ ಮೋಟಗಿ, ರುದ್ರಗೌಡ ಗೌಡಪ್ಪನವರ, ವೀರಭದ್ರಪ್ಪ ಪತ್ತಾರ, ಚಂದ್ರಶೇಖರ ಬೆಳಗಲ್, ಬಸವರಾಜ ಹಕ್ಕಿ, ಮರೇಗೌಡ ಬೋದುರ, ಬಸವರಾಜ ದ್ಯಾವಣ್ಣನವರ, ಮುಖಂಡರಾದ ಹನುಮಂತ ಪೂಜಾರ, ವಿದ್ಯಾಧರ ಸೊಪ್ಪಿಮಠ, ಮೌಲಸಾಬ್ ಮೋಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net