

ಹನುಮಸಾಗರ: ತಂತ್ರಜ್ಞಾನ ಬಳಸಿಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರಳವಾಗಿ ಹಾಗೂ ಯಾವುದೇ ಸಮಯದಲ್ಲಿ ಕೈಗೆಟಕುವಂತಹ ಸಾಧನದೊಂದಿಗೆ ಬೋಧನೆ ಮಾಡಿದ ವಿಧಾನ ಇಲಾಖೆಗೆ ಹೆಮ್ಮೆ ತರುವಂಥದ್ದು ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಪ್ರೌಢಶಾಲಾ ವಿಭಾಗದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕಿಶನರಾವ್ ಕುಲಕರ್ಣಿ ತಯಾರಿಸಿದ ಸಮಾಜ ವಿಜ್ಞಾನ ವಿಷಯದ ಡಿಜಿಟಲ್ ಪ್ರಶ್ನೆ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಯೂಟ್ಯೂಬ್ ಚಾನಲ್ ಮುಖಾಂತರ ಪ್ರತಿಯೊಂದು ಪಾಠಗಳನ್ನು ಡಿಜಿಟಲೀಕರಣಗೊಳಿಸಿರುವುದು ಶ್ರಮದ ಕೆಲಸ. ಇನ್ನುಳಿದ ಶಾಲಾ ಮಕ್ಕಳು ಮತ್ತು ಶಿಕ್ಷಕರು ಈ ಸಾಧನವನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಬಿಇಒ ಹಂಚ್ಯಾಳಪ್ಪ ಮೇಟಿ, ಮುಖ್ಯಶಿಕ್ಷಕರಾದ ಎಂ.ಎಸ್.ಬಡದಾನಿ, ಹುಸೇನ್ ಸಾಬ್ ಇಳಕಲ್ಲ, ಕಿಶನರಾವ್ ಕುಲಕರ್ಣಿ, ರಾಯಮ್ಮ ಉಕ್ಕಲಿ, ಉಪನ್ಯಾಸಕ ಲಕ್ಷ್ಮಣ ರಾಠೋಡ್, ಶಿಕ್ಷಕರಾದ ಈರಣ್ಣ ಪರಸಾಪುರ, ರಾಮಚಂದ್ರ ಬಡಿಗೇರ, ಚಂದ್ರಶೇಖರ ಗುಳೇದ, ಈರಣ್ಣ ಪರಸಾಪುರ, ಉಮಾಕಾಂತ ರಜಪೂತ, ರಾಜಾಬಕ್ಷಾರ ಪೆಂಡಾರಿ, ನಾರಾಯಣ ಹೂಲಗೇರಿ, ಸುಮಂಗಲಾ ತರಿಕೇರಿ, ರೋಹಿಣಿ ಜ್ಯೋತಿ, ಗೀತಾ ಪಾಟೀಲ್, ಶಾರದಾ ಗುಡಸಲಿ, ಬಸಮ್ಮ ಇದ್ದರು.