ಶಾಂತಿಯುತವಾಗಿ ಹನುಮನ ಸಂಕೀರ್ತನಾ ಯಾತ್ರೆ ಆಚರಿಸಿ

SRP_12-01jpg
Published on

ಶ್ರೀರಂಗಪಟ್ಟಣ: ಯಾವುದೇ ಕೋಮು ದ್ವೇಷಕ್ಕೆ ಆಸ್ಪದ ನೀಡದಂತೆ ಶಾಂತಿ ಹಾಗೂ ಸೌರ್ಹದತೆಯಿಂದ ಹನುಮನ ಸಂಕೀರ್ತನಾ ಯಾತ್ರೆ ಆಚರಿಸುವಂತೆ ಜಿಲ್ಲಾಕಾರಿ ಡಾ.ಕುಮಾರ ಎನ್.ಯತೀಶ್ ಖಡಕ್ ಸೂಚನೆ ನೀಡಿದರು.

ಪಟ್ಟಣದಲ್ಲಿ ಡಿ.17ರಿಂದ ಆರಂಭವಾಗುವ ಮೂಡಲುಬಾಗಿಲು ಹನುಮನ ಸಂಕೀರ್ತನಾ ಯಾತ್ರೆ ಸಂಬಂಧ ಶ್ರೀರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕೋಮು ಸೌರ್ಹಾದ ಸಭೆಯಲ್ಲಿ ಎರಡು ಧರ್ಮಗಳ ಮುಖಂಡರೊಂದಿಗೆ ಚರ್ಚಿಸಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾತನಾಡಿದರು.

ಯಾವುದೇ ಧರ್ಮಗಳ ಆಚರಣೆಗಳನ್ನು ಪ್ರಚೋದಿಸುವ ಹಾಗೂ ಹೀಯಾಳಿಸುವ ಕೆಲಸ ಯಾರಿಂದಲೂ ಆಗಬಾರದು. ನಮ್ಮ ಆಚರಣೆ ಎಲ್ಲರಿಗೂ ಸಂಸತಸ ಮೂಡಿಸುವಂತಿರಬೇಕೇ ಹೊರತು, ಅದರಿಂದ ಸಮಸ್ಯೆಯಾಗಬಾರದು ಎಂದು ತಿಳಿಸಿದರು.

ಎಸ್ಪಿ ಎನ್.ಯತೀಶ್ ಮಾತನಾಡಿ, ಕಳೆದ ಬಾರಿ ಯಾತ್ರೆ ವೇಳೆ ನಡೆದ ಕೆಲ ಘಟನೆಗಳು ಈ ಬಾರಿ ಮರುಕಳಿಸದಂತೆ ಕಾರ್ಯಕ್ರಮದ ಆಯೋಜಕರು ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದತಾತ್ಮಕ ಹೇಳಿಕೆಗಳು ಹಾಗೂ ಪ್ರಚೋದನಾತ್ಮಕ ಸಂದೇಶಗಳನ್ನು ಹರಡುವುದು ಅಥವಾ ಆಚರಣೆ ವೇಳೆ ಯಾವುದೇ ದುರ್ನಡತೆ ಕಂಡುಬಂದಲ್ಲಿ ಸಂಬಂಧಪಟ್ಟವರು ಹಾಗೂ ಆಯೋಜಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿದ್ದ ವಕ್ ಎಸ್ಟೇಟ್ ಕಾರ್ಯದರ್ಶಿ ರ್ಇಾನ್ ಅಹಮದ್ ಹಾಗೂ ಸಮಾನ ಮನಸ್ಕರ ವೇದಿಕೆಯ ನಾಯಕಿ ಅಮ್ರೀನ್ ತಾಜ್ ಮಾತನಾಡಿ, ಶ್ರೀರಂಗಪಟ್ಟಣದಲ್ಲಿ ನಾವು ಸಹೋದರತ್ವ ಭಾವನೆಯಿಂದ ಅನ್ಯೋನ್ಯತೆಯ ಜೀವನ ಕಂಡುಕೊಂಡಿದ್ದೇವೆ. ಹಿಂದು ದೇವತೆಗಳು ಹಾಗೂ ಧರ್ಮದ ಆಚರಣೆಗಳಿಗೆ ನಮ್ಮ ಯಾವ ವಿರೋಧವಿಲ್ಲ. ಆದರೆ ಹೊರಗಿನಿಂದ ಆಗಮಿಸಿದ ಕೆಲವರು ನಮ್ಮ ನಡುವೆ ವೈಷಮ್ಯ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಕ್ರಮವಹಿಸಿ ಎಂದು ಮನವಿ ಮಾಡಿದರು.

ಪಾಂಡವಪುರ ಎಸಿ ನಂದೀಶ್, ಡಿವೈಎಸ್ಪಿ ಮುರುಳಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಅಬಕಾರಿ ಇನ್ಸ್‌ಪೆಕ್ಟರ್ ರಮ್ಯಾ, ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ಹರ್ಷ, ದರಸಗುಪ್ಪೆ ಸತೀಶ್, ಜಿಲ್ಲಾ ನ್ಯಾಯಾ ಜಾಗರಣ ಬಾಲರಾಜ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ಯಾಮ, ತಾಲೂಕು ಸದಸ್ಯ ಪ್ರೇಮ್, ಟಿಪ್ಪು ಎಸ್ಟೇಟ್ ಕಮಿಟಿ ಸದಸ್ಯ ಉಬೇದುಲ್ಲಾ, ಇಮ್ರಾನ್, ಅಬ್ದೂಲ್ ರವ್ೂ, ಏಜಾಜ್ ಪಾಷ, ಗಂಜಾಂ ಖಾಸಿಮ್, ರ್ಇಾನ್ ಬೇಗ್, ಸನಾ, ಮುಜೀಬ್ ಶಾಲೀಮಾರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net