

ತಿಕೋಟಾ: ಪಟ್ಟಣದ ಶ್ರೀರಾಮ ಕಾಲನಿಯ ಹನುಮಾನ ದೇವಸ್ಥಾನದಲ್ಲಿ ಶನಿವಾರ ಕಾರ್ತಿಕ ಮಾಸದ ಕಾರ್ಯಕ್ರಮ ಮುಕ್ತಾಯವಾಯಿತು.
ಪ್ರತಿದಿನ ಹನುಮ ದೇವರಿಗೆ ವಿಶೇಷ ಪೂಜೆ, ಸಂಜೆ ದೀಪೋತ್ಸವ ನಡೆಯಿತು. ಶನಿವಾರ ಬೆಳಗ್ಗೆ ದೇವರಿಗೆ ವಿಶೇಷ ಅಲಂಕಾರ, ಸಂಜೆ ದೀಪೋತ್ಸವ, ಮಹಾಪ್ರಸಾದ ನಡೆಯಿತು.
ರೇಣುಕ ಯಲ್ಲಮ್ಮ ನಾಟಕ ರಾತ್ರಿ ಪ್ರದರ್ಶನವಾಯಿತು. ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಹನುಮಾನ ದೇವರ ಅರ್ಚಕ ಭೀಮು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.