ಸೌಲಭ್ಯ ಪಡೆಯಲು ಸೂಕ್ತ ದಾಖಲೆ ಸಲ್ಲಿಸಿ; ಉಪ ತಹಸೀಲ್ದಾರ್ ಆಂಜನೇಐ ಮೊಸರಕಲ್ ಹೇಳಿಕೆ

01092021 Hanumasagar Kandaya adalath
Published on

ಕಂದಾಯ ಅದಾಲತ್ ಆಯೋಜನೆ

ಹನುಮಸಾಗರ: ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಸ್ಥಳದಲ್ಲಿಯೇ ಸರ್ಕಾರಿ ಸೌಲಭ್ಯಗಳ ಮಂಜೂರಾತಿ ಆದೇಶ ಪ್ರತಿ ನೀಡಲಾಗುವುದು ಎಂದು ಉಪ ತಹಸೀಲ್ದಾರ್ ಆಂಜನೇಯ ಮೊಸರಕಲ್ ಹೇಳಿದರು.

ಸಮೀಪದ ತುಮರಿಕೊಪ್ಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹನುಮನಾಳ ಹೋಬಳಿ ಮಟ್ಟ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ವೃದ್ಧರು, ವಿಧವೆಯರು, ಅಂಗವಿಕಲರ ಜೀವನೋಪಾಯಕ್ಕಾಗಿ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ನೀಡುತ್ತಿದೆ. ಕೆಲವರು ಸೌಲಭ್ಯ ಪಡೆದುಕೊಳ್ಳಲು ಸೂಕ್ತ ದಾಖಲೆಗಳಿಲ್ಲದೆ ಕಚೇರಿಗೆ ಅಲೆಯುತ್ತಾರೆ. ಇನ್ನು ಕೆಲವರು ಹಣ ನೀಡಿ ದಲ್ಲಾಳಿಗಳ ಮೂಲಕ ಕೆಲಸ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಸಮರ್ಪಕ ದಾಖಲೆಗಳಿಲ್ಲದಿದ್ದರೆ ಎಲ್ಲ ಪ್ರಯತ್ನ ವಿಫಲವಾಗುತ್ತದೆ. ಅದಕ್ಕಾಗಿ ಗ್ರಾಮಲೆಕ್ಕಾಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು, ಅವರು ಹೇಳಿದ ದಾಖಲೆಗಳನ್ನು ಸಲ್ಲಿಸಿದರೆ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net