

ಹನುಮಸಾಗರ: ಬೇಸಿಗೆಯಲ್ಲಿ ಕೆಲಸವಿಲ್ಲ ಎಂದು ಗುಳೆ ಹೋಗದೆ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಹಗೀರ ಗುಡದೂರ ಗ್ರಾಪಂ ಅಧ್ಯಕ್ಷ ಕೆ.ಎಸ್.ಹನುಮಂತಪ್ಪ ಹೇಳಿದರು.
ಸಮೀಪದ ಕೋನಾಪುರ ಮತ್ತು ಪರಮನಹಟ್ಟಿ ಗ್ರಾಮಗಳಲ್ಲಿ ಭಾನುವಾರ ದುಡಿಯೋಣ ಬಾ ಅಭಿಯಾನದಡಿ ಕೆರೆ ಹಾಗೂ ನಾಲಾ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೋನಾಪೂರ ಕೆರೆ ಹೂಳೆತ್ತುವ ಕಾಮಗಾರಿಗೆ 10 ಲಕ್ಷ ರೂ. ಹಾಗೂ ಪರಮನಹಟ್ಟಿ ನಾಲಾ ಹೂಳೆತ್ತಲು ಏಳು ಲಕ್ಷ ರೂ. ಕ್ರಿಯಾಯೋಜನೆ ರೂಪಿಸಲಾಗಿದೆ. ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ 118 ಮತ್ತು ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ 181 ಕೂಲಿಕಾರರು ಕೆಲಸ ನಿರ್ವಹಿಸಲಿದ್ದಾರೆ ಎಂದರು.