

ಹನುಮಸಾಗರ: ಕಬ್ಬರಗಿ ಸಹಿಪ್ರಾ ಶಾಲೆಯ ಶಿಕ್ಷಕರು ಭಾನುವಾರ ಮನೆಮನೆಗೆ ತೆರಳಿ ಸಂವೇದ ಪರ್ಯಾಯ ಕಲಿಕಾ ಚಟುವಟಿಕೆಗಳನ್ನು ಚಂದನ ವಾಹಿನಿಯಲ್ಲಿ ವೀಕ್ಷಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಿಕ್ಷಕ ಯಲ್ಲನಗೌಡ ಪಾಟೀಲ್ ಮಾತನಾಡಿ, ಕೋವಿಡ್-19 ಯಿಂದ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಚಂದನ ವಾಹಿನಿಯಲ್ಲಿ ಸಂವೇದ ಪರ್ಯಾಯ ಕಲಿಕಾ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು, ಮಕ್ಕಳು ನಿತ್ಯ ವೀಕ್ಷಣೆ ಮಾಡಬೇಕು. ಪಾಲಕರು ತಮ್ಮ ಮಕ್ಕಳು ಕಲಿಕಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಚಂದನ ವಾಹಿನಿಯಲ್ಲಿ ನಿತ್ಯ ಸಮಯಕ್ಕೆ ಸರಿಯಾಗಿ ಸಂವೇದ ಪರ್ಯಾಯ ಕಲಿಕಾ ಪಾಠಗಳು ಪ್ರಸಾರವಾಗುತ್ತಿದ್ದು, ಮಕ್ಕಳು ವಿಕ್ಷಿಸುವಂತೆ ನೋಡಿಕೊಳ್ಳಬೇಕು ಎಂದರು.ಶಿಕ್ಷಕ ಪರಸಪ್ಪ ವಣಗೇರಿ ಇದ್ದರು.