ಧಾರ್ಮಿಕ ಸ್ಥಳಗಳ ಸಂರಕ್ಷಣೆ ಅಗತ್ಯ

padayatre
ಹನುಮ ಪಾದಯಾತ್ರೆ
Published on

ವಾಡ ಶ್ರೀಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಇತಿಹಾಸ ಪ್ರಸಿದ್ಧ ದೇಗುಲ, ಸ್ಮಾರಕ ಸೇರಿ ಬೆಟ್ಟಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕಿದೆ ಎಂದು ಪವಾಡ ಶ್ರೀಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಚನ್ನಪ್ಪಬಡಾವಣೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಬಳಿ ಶ್ರೀ ಸಿದ್ಧರಬೆಟ್ಟ ಸೇವಾ ಸಮಿತಿ ಆಯೋಜಿಸಿದ್ದ ಹನುಮ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಸಂಸ್ಕೃತಿಕ ಪ್ರತೀಕವಾಗಿರುವ ದೇಗುಲ, ಧಾರ್ಮಿಕ ಸ್ಥಳಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ. 8 ಶತಮಾನಗಳಿಗೂ ಮೀರಿದ ಇತಿಹಾಸ ಸಿದ್ಧರಬೆಟ್ಟಕ್ಕಿದೆ. ಬೆಟ್ಟದಲ್ಲಿರುವ ದೇಗುಲಗಳ ಅಭಿವೃದ್ಧಿ ಜತೆಗೆ ಬೆಟ್ಟದ ಪಾಕೃತಿಕ ಸೌಂದರ್ಯ ರಕ್ಷಿಸಬೇಕಿದೆ. ಪಾರಂಪರಿಕ ಹಾಗೂ ಸುಂದರ ಪ್ರವಾಸಿತಾಣವಾಗಿ ಮಾರ್ಪಾಡಾಗಬೇಕು. ಕೆಲ ಯುವಕರ ತಂಡ ಹನುಮ ಮಾಲೆ ಧಾರಣೆ ಮಾಡಿ ತಾಲೂಕಿನ ಎಲ್ಲ ಜನತೆಯನ್ನು ಒಗ್ಗೂಡಿಸಿ ಮಾಡುತ್ತಿರುವ ಪಾದಯಾತ್ರೆ ಅರ್ಥಪೂರ್ಣವಾಗಿದೆ ಎಂದರು.
ಆಯೋಜಕ ಎಂ.ಎನ್.ರಾಮ್ ಮಾತನಾಡಿ, ತಾಲೂಕಿನಲ್ಲಿರುವ ಧಾರ್ಮಿಕ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಕ್ಷ ಮತ್ತು ಜಾತ್ಯಾತೀತ ಪಾದಯಾತ್ರೆಗೆ ಉತ್ತಮ ಸಹಕಾರ ದೊರೆತಿದೆ. ನಗರದ ಚನ್ನಪ್ಪ ಬಡಾವಣೆಯ ವಿರಾಂಜನೇಯ ಸ್ವಾಮಿ ದೇಗುಲದಿಂದ ನಿಜಗಲ್ಲು ಗ್ರಾಮದ ಸಿದ್ಧರಬೆಟ್ಟದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣಿ, ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ವಿಜಯ್‌ಕುಮಾರ್, ಉಪಾಧ್ಯಕ್ಷ ರುದ್ರೇಶ್, ಒಬಿಸಿ ಮೋರ್ಚಾ ಉಪಾಧ್ಯಕ್ಷ ರವಿಕುಮಾರ್, ಕನಕ ಕ್ರೇಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಲೋಕೇಶ್, ನಿರ್ದೇಶಕ ರಾಜಶೇಖರ್, ಮುಖಂಡ ಸತೀಶ್, ಗೋಪಾಲಕೃಷ್ಣ, ಡಿ.ಸಿದ್ದರಾಜು, ಶಂಕರ್, ಸೌಮ್ಯಾ, ಶೀಲಾ, ಮಂಜುಳಾ ಹನುಮಂತರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net