ಬಲಭೀಮ ದೇಗುಲದಲ್ಲಿ ನಾನಾ ಕಾರ್ಯಕ್ರಮ

HATTI 03
Published on

ಹಟ್ಟಿಚಿನ್ನದಗಣಿ: ವಂದಲಿ ಬಲಭೀಮ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಸುಪ್ರಭಾತ, ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ, 10 ಗಂಟೆಗೆ ತೊಟ್ಟಿಲೋತ್ಸವ ನಡೆದವು. ನಂತರ ಮಾನ್ವಿ, ಲಿಂಗಸುಗೂರು, ಹಟ್ಟಿಚಿನ್ನದಗಣಿಯ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಸಹಿತ ರಥೋತ್ಸವ ನಡೆಯಿತು. ಬಳಿಕ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ ಮಧ್ಯಾಹ್ನ ತೀರ್ಥ-ಪ್ರಸಾದ ನಡೆಯಿತು. ನರಸಿಂಹಾಚಾರ್ ಜೋಷಿ ಪೂಜಾ ಕೈಂಕರ್ಯದ ನೇತೃತ್ವ ವಹಿಸಿದ್ದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ವಿ.ಎ.ಮಾಲಿಪಾಟೀಲ್, ಪವಮಾನ ಧಾರ್ಮಿಕ ಸಮಿತಿ ಅಧ್ಯಕ್ಷ ಹನುಮಂತರಾವ್ ಕುಲಕರ್ಣಿ, ರಾಜಗೋಪಾಲ್ ರಾವ್ ಕುಲಕರ್ಣಿ, ಧೃವರಾಜ್ ಕುಲಕರ್ಣಿ, ಮುರಳೀಧರ್ ಕುಲಕರ್ಣಿ, ಬಲಭೀಮರಾವ್ ಕುಲಕರ್ಣಿ, ವರದರಾಜ್ ಕುಲಕರ್ಣಿ, ಭೀಮಸೇನರಾವ್ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net