

ಗೋಣಿಕೊಪ್ಪಲು: ಶ್ರೀರಾಮ ಮಂದಿರ ಸಮಿತಿಯಿಂದ ತಿತಿಮತಿಯಲ್ಲಿ ಸೋಮವಾರ ಆಯೋಜಿಸಿದ್ದ ಹನುಮ ಜಯಂತಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಚಕ್ಕೇರ ಮನುಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಮಹಿಳಾ ಮಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು ನಾಲ್ಕು ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯವಾಯಿತು.
ಕೊನೆಯ ದಿನದ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ಪ್ರಕಾಶ್, ಮೆರವಣಿಗೆಯಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಚಂಡೆ ವಾದ್ಯ, ಗೊಂಬೆ ಕುಣಿತ, ಡಿಜೆಯೊಂದಿಗೆ ಹನುಮಾನ್ ಚಾಲೀಸಾ ಪಠಣೆ ಮಾಡಲಾಯಿತು.
ಮುಖಂಡರಾದ ಕಿಲನ್ ಗಣಪತಿ, ಮಧು, ಸುವಿನ್ ಗಣಪತಿ, ಅಜಿತ್ ಕರುಂಬಯ್ಯ, ವಿಜು ಸುಬ್ರಮಣಿ, ರಾಜೇಶ್, ಸುರೇಶ್ ರೈ ಸಮಿತಿ ಪದಾಧಿಕಾರಿಗಳಾದ ಅನೂಪ್, ಸಿದ್ದರಾಜು, ಚಂದ್ರ, ಮನುನಂಜಪ್ಪ, ಮಣಿ, ಗೋವಿಂದ ಇತರರು ಉಪಸ್ಥಿತರಿದ್ದರು.