ಹನುಮ ಜಯಂತಿ ನಾಳೆ

21 DWD (HANUMA JAYANTI)
Published on

ಧಾರವಾಡ : ತಾಲೂಕಿನ ಅಮ್ಮಿನಬಾವಿ ಗ್ರಾಪಂ ಪಕ್ಕದಲ್ಲಿರುವ ಹಳೇ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಏ.23 ರಂದು ಹನುಮ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀ ವೀರಾಂಜನೇಯ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ, ಶ್ರೀ ಓಂಕಾರ ಸೇವಾ ಸಮಿತಿ ಹಾಗೂ ಅಮ್ಮಿನಬಾವಿಯ ವಿವಿಧ ಯುವಕ ಸಂಗಳ ಆಶ್ರಯದಲ್ಲಿ ನಡೆಯುವ ಹನುಮ ಜಯಂತಿ ನಿಮಿತ್ತ ಏ. 22ರಂದು ಪ್ರಾತಃಕಾಲದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಏ.23 ರಂದು ಬೆಳಗ್ಗೆ ಶ್ರೀ ವೀರಾಂಜನೇಯ ವಿಗ್ರಹಕ್ಕೆ ಅಭಿಷೇಕ, ವಿಶೇಷ ಅಲಂಕಾರ, 9 ಗಂಟೆಗೆ ತೊಟ್ಟಿಲೋತ್ಸವ ಜರುಗಲಿದೆ.
ಏ.23ರಂದು ಬೆಳಗ್ಗೆ 9.15ಕ್ಕೆ ಶ್ರೀ ವೀರಾಂಜನೇಯಸ್ವಾಮಿ ಭಾವಚಿತ್ರದ ಮೆರವಣಿಯನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಶ್ರೀನಾರಾಯಣ ಸ್ವಾಮೀಜಿ ಜಂಟಿಯಾಗಿ ಉದ್ಘಾಟಿಸುವರು. ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net