

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಹನುಮಂತ ಸ್ವಾಮಿ ಭಕ್ತಿಗೆ ಆದರ್ಶ. ಆತ ಅತಿ ಧೈರ್ಯವಂತ. ಯಾವುದೇ ಕಾರ್ಯ ಸಾಧಿಸಬೇಕಾದಲ್ಲಿ ಅದನ್ನು ಸಾಧಿಸುವಂಥ ಪರಾಕ್ರಮಿ. ಶ್ರೀರಾಮನ ಸೇವಕ. ದುಷ್ಟಶಕ್ತಿಗಳನ್ನು ನಿಗ್ರಹಿಸಿದ ವೀರ ಪುರುಷ. ಆತನ ಆರಾಧನೆ ಪರಿಣಾಮ ನಮಗೂ ರಾಷ್ಟ್ರಕ್ಕೂ ಶಕ್ತಿ ತುಂಬಲಿ ಎಂದು ಶ್ರೀ ಅರಿಕೆಗುಡ್ದೆ ವನದುರ್ಗಾ ದೇವಾಲಯ ಅಧ್ಯಕ್ಷ ಪ್ರಕಾಶ ಪಿಲಿಕಬೆ ಹೇಳಿದರು.
ಶಿಶಿಲದಲ್ಲಿ ಶ್ರೀ ಆಂಜನೇಯ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಜೀವ ವಿಮಾ ಬೆಳ್ತಂಗಡಿ ಅಧಿಕಾರಿ ಉದಯಶಂಕರ ಅರಸಿನಮಕ್ಕಿ ಮಾತನಾಡಿದರು. ಕಾಸರಗೋಡಿನ ಹಿರಿಯ ಭಜನಾ ಪಟು ಹರಿದಾಸ ಜಯಾನಂದ ಕಾಸರಗೋಡು ಮತ್ತು ಭಜನಾ ಸಾಧಕ ಬಾಲಕೃಷ್ಣ ಪಂಜ ಅವರನ್ನು ಜಯರಾಮ ನೆಲ್ಲಿತ್ತಾಯ ಮತ್ತು ರೇಖಾ ಜಯರಾಮ ನೆಲ್ಲಿತ್ತಾಯ ಗೌರವಿಸಿದರು. ರಾಘವೇಂದ್ರ ಕಿಗ್ಗ ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಆಕರ್ಷಕ ಕುಣಿತ ಭಜನೆ ನಡೆಯಿತು. ಬಿಳಿನೆಲೆ ಭಜನಾ ಮಂಡಳಿಯ ಸುಂದರ ಮತ್ತು ತಂಡದವರಿಂದ ಮತ್ತು ಹರಿದಾಸ ಕಾಸರಗೋಡು ಜಯಾನಂದ ಅವರ ತಂಡದಿಂದ ಭಜನೆ ನಡೆಯಿತು. ಬೆಳ್ತಂಗಡಿ, ಪುತ್ತೂರು, ಕಾಸರಗೋಡು ಸೇರಿದಂತೆ ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು.