

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಇಟಿಗಟ್ಟಿ ಗ್ರಾಮದ ವಾಡೆದ ಹನುಮಪ್ಪನ ಸನ್ನಿಧಾನದಲ್ಲಿ ಏ. 12ರಂದು 32ನೇ ವರ್ಷದ ಶ್ರೀ ಹನುಮ ಜಯಂತಿ ಉತ್ಸವ ಆಯೋಜಿಸಲಾಗಿದೆ. ಜಯಂತಿಯ ಅಂಗವಾಗಿ ಏ. 11ರಂದು ಸಂಜೆ 6 ಗಂಟೆಗೆ ಶ್ರೀ ಕಟಗೇರಿ ದಾಸರ ಶಿಷ್ಯ ಉದಯ ದೇಶಪಾಂಡೆ ಮತ್ತು ತಂಡದಿ0ದ ಸಂಗೀತ ಕಾರ್ಯಕ್ರಮವಿದೆ. 12ರಂದು ಪ್ರಾತಃಕಾಲ 5.30ಕ್ಕೆ ಪಂಚಾಮೃತ ಅಭಿಷೇಕ, 6 ಗಂಟೆಗೆ ಅಭಿಷೇಕ, 6 ಗಂಟೆಗೆ ತೊಟ್ಟಿಲ ಸೇವೆ ನಂತರ ಪುಷ್ಪಾಲಂಕಾರ, 8.30ಕ್ಕೆ ಉಪಹಾರ, 9 ಗಂಟೆಗೆ ಪವಮಾನ ಹೋಮ, 11 ಗಂಟೆಗೆ ಜ್ಞಾನಕಾರ್ಯ ಪ್ರವಚನ, 12ಕ್ಕೆ ಮಹಾಮಂಗಳಾರತಿ, 1 ಗಂಟೆಗೆ ಪ್ರಸಾದ ವ್ಯವಸ್ಥೆ ಇರಲಿದೆ. 13ರಂದು ಪ್ರಾತಃಕಾಲ 6ಕ್ಕೆ ನಿರ್ಮಾಲ್ಯ ವಿಸರ್ಜನೆ, 6.30ಕ್ಕೆ ಶ್ರೀ ಹರಿವಾಯುಸ್ತುತಿ ಪುನಶ್ಚರಣ ಮಧು ಅಭಿಷೇಕ, 8.30ಕ್ಕೆ ಉಪಹಾರ, 12ಕ್ಕೆ ಮಹಾಮಂಗಳಾರತಿ, 12.30 ಗಂಟೆಗೆ ಪ್ರಸಾದ ವ್ಯವಸ್ಥೆ ಇರಲಿದೆ.