ಹನುಮಜಯಂತಿ ಆಚರಣೆ ಅದ್ದೂರಿ

12 HDLP 01
ಹೂವಿನಹಡಗಲಿ ತೇರು ಹನುಮಪ್ಪ ಸ್ವಾಮಿ ದೇವಸ್ಥಾನದಲ್ಲಿ ಹನುಮಜಯಂತಿ ಅಂಗವಾಗಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು.
Published on

ಹೂವಿನಹಡಗಲಿ: ತಾಲೂಕಿನ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಶನಿವಾರ ಹನುಮಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ತಾಲೂಕಿನ ಸುಕ್ಷೇತ್ರ ಮದಲಗಟ್ಟಿಯಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿದ ನಂತರ ಭಕ್ತರು ತಮ್ಮ ಹರೆಕೆಗಳನ್ನು ತೀರಿಸಿದರು.

ಪಟ್ಟಣದ ತೇರು ಹನುಮಪ್ಪ ಸ್ವಾಮಿ ದೇವಸ್ಥಾನದಲ್ಲಿ ಅಲ್ಲಿಪುರ ಗ್ರಾಮದ ಹನುಮಾನ್ ಚಾಲೀಸಾ ಬಳಗದಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಪಠಣ ಮಾಡಲಾಯಿತು.

ಹುಣ್ಣಿಮೆ ಅಂಗವಾಗಿ ಸುಕ್ಷೇತ್ರ ಮೈಲಾರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಯಿತು. ಹೊಳಗುಂದಿ ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿಯ ಅಗ್ನಿ ಮಹೋತ್ಸವ ಜರುಗಿತು. ಬಾವಿಹಳ್ಳಿ ಗ್ರಾಮದ ಶ್ರೀ ಕರಿಬಸವೇಶ್ವರ ರಥೋತ್ಸವ, ಹಿರೇಮಲ್ಲನಕೇರಿ ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಪಟ್ಟಣದಲ್ಲಿ ಶ್ರೀರಾಮ ದೇವರ ರಥೋತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net