ಹನುಮ ಜಯಂತಿ ಆಚರಣೆ

Hanuman Jayanti celebration
ಹನುಮ ಜಯಂತಿ
Published on

ವಿಜಯಪುರ : ಜೈಲ್​ ರಸ್ತೆಯ ಶಹಾಪುರ ಗೇಟ್​ ಬಳಿಯ ಹನುಮಂತ ದೇವರ ದೇವಸ್ಥಾನದಲ್ಲಿ ಏ. 12 ರಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅಂದು ಬೆಳಗ್ಗೆ 6ಕ್ಕೆ ಅಭಿಷೇಕ, ಎಲಿಪೂಜೆ, ಹೋಮ, ತೊಟ್ಟಿಲೋತ್ಸವ, 9ಕ್ಕೆ ಉಪಾಹಾರ, ಭಕ್ತಿಯ ರಸಮಂಜರಿ ಕಾರ್ಯಕ್ರಮ, ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1ಕ್ಕೆ ಅನ್ನಪ್ರಸಾದ ಜರುಗಲಿದೆ.

ಸಂಜೆ 5ಕ್ಕೆ ವಿವಿಧ ವಾದ್ಯಗಳೊಂದಿಗೆ ಬೆಳ್ಳಿಯ ಪಲ್ಲಕ್ಕಿ ಮತ್ತು 5 ಅಡಿ ಎತ್ತರ ಬೆಳ್ಳಿಮೂರ್ತಿ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ ಮುಳ್ಳಗಸಿ ಮೂಲಕ ಚಂದಾಬಾವಡಿ, ಗಾಂಧಿ ವೃತ್ತ, ಸಿದ್ಧೇಶ್ವರ ದೇವಸ್ಥಾನದ ಮಾರ್ಗ, ಮಹಾವೀರ ರಸ್ತೆ, ಬಾಲಾಜಿ ದೇವಸ್ಥಾನ, ರಾಮಮಂದಿರ, ಲದ್ದಿಕಟ್ಟಿ ಹನುಮಾನ ದೇವಸ್ಥಾನ ಮೂಲಕ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಲಿದೆ ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಸುನೀಲ ಕೆಂಭಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ : ಅಂದು ಬೆಳಗ್ಗೆ 10.30ಕ್ಕೆ ದೇವಸ್ಥಾನಕ್ಕೆ ದೇಣಿಗೆ ನೀಡಿದ ಮಹನೀಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಆರ್​.ಕೆ. ಸುರಪೂರ ಅಧ್ಯಕ್ಷತೆ ವಹಿಸುವರು. ತೊರವಿಯ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ಕಲಬುರಗಿಯ ಗ್ರಾಮೀಣ ವಲಯ ಶಾಸಕ ಬಸವರಾಜ ಮತ್ತಿಮೂಡ, ವಿಜಯನಗರದ ಅಖಿಲ ಕರ್ನಾಟಕ ಮೋಚಗಾರ ಸಂದ ರಾಜ್ಯಾಧ್ಯಕ್ಷ ಶಿವಪ್ಪಾಜಿ ಮುಳಗುಂದ, ಪಾಲಿಕೆ ಸದಸ್ಯ ರಾಹುಲ ಜಾಧವ, ಕೆಂಚಪ್ಪ ಹೊನಕೇರಿ, ಸಿದ್ರಾಮ ಹತ್ತರಕರ, ಕಾಶಿರಾಯ ನಂದೂರಕರ, ಲಕ್ಷ$್ಮಣ ಡಿಗ್ಗಾವಿ, ಶಶಿಕಾಂತ ಮಾಲಗತ್ತಿ, ಅಮೀತ ಹೊನಕೇರಿ, ಹನುಮಂತ ಸಕನಾರಗಿ ಭಾಗವಹಿಸುವರು.

ಫೋಟೋ : ಎಂಎಂ 10&16

ಹನುಮಂತ ದೇವರು

**

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net