ಹನುಮ ಜಯಂತಿ ಆಚರಣೆ

RKP_ ymikeri
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನುಗ್ಗಿಕೇರಿ ಗ್ರಾಮದ ಹನುಮಂತ ದೇವಸ್ಥಾನ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ನುಗ್ಗಿಕೇರಿ ದೇವಸ್ಥಾನದಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಅಭಿಷೇಕ, ಅಲಂಕಾರ ಆರಂಭಿಸಿ 6.11ಕ್ಕೆ ತೊಟ್ಟಿಲೋತ್ಸವ, 11 ಗಂಟೆಗೆ ಅದ್ಧೂರಿಯಾಗಿ ರಥೋತ್ಸವ ನಡೆಸಲಾಯಿತು.
ಉಳಿದಂತೆ ನಗರದ ಮುದಿ ಮಾರುತಿ ದೇವಸ್ಥಾನ, ಲೈನ್​ ಬಜಾರ್​ ಹನುಮಂತ ದೇವಸ್ಥಾನ, ಮದಿಹಾಳ ಮಾರುತಿ ದೇವಸ್ಥಾನ, ಮಾಳಮಡ್ಡಿ ಗೌಳಿಗಲ್ಲಿ, ಎಮ್ಮಿಕೇರಿ ಸೇರಿ ವಿವಿಧ ಕಡೆಗಳಲ್ಲಿನ ಹನುಮಂತನ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಪೂಜೆ, ಹೋಮ ಹವನ ನೆರವೇರಿಸಲಾಯಿತು. ಬಳಿಕ ತೊಟ್ಟಿಲೋತ್ಸವ ನೆರವೇರಿಸಿ ಮಹಾ ಪ್ರಸಾದ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net