ರಥದಲ್ಲಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹನ

12Alagawadi1
Published on

ಅಳಗವಾಡಿ:ಹನುಮ ಜಯಂತಿ ಹಾಗೂ ಪ್ರಥಮ ವರ್ಷದ ರಥೋತ್ಸವ ಅಂಗವಾಗಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಹನುಮಾನ ದೇವರ ನಾಮಕರಣ ಹಾಗೂ ಓಕಳಿ ಕೊಂಡ ಪೂಜೆ ಶನಿವಾರ ನೆರವೇರಿತು.

ನಂತರ ದೇವಸ್ಥಾನದಲ್ಲಿ ರಥದಲ್ಲಿನ ಮೂರ್ತಿ ಚರ ಪ್ರತಿಷ್ಠಾನ ಹಾಗೂ ಕಳಸಾರೋಹನ ಮಾಡುವ ಸಲುವಾಗಿ ಹೋಮ ಕಾರ್ಯ ಕೈಗೊಳ್ಳಲಾಯಿತು. ಕವಲಗುಡ್ಡದ ಅಮರೇಶ್ವರ ಶ್ರೀಗಳು ರಥಕ್ಕೆ ಕಳಸಾರೋಹಣ ಮಾಡಿ ರಥದಲ್ಲಿ ಹನುಮಾನ ದೇವರ ಚರ ಪ್ರತಿಷ್ಠಾಪನೆ ಮಾಡಿದರು. ದಿಗಂಬರೇಶ್ವರ ಮಠದ ನಿಂಗಯ್ಯ ಶ್ರೀ, ಪುಂಡಲಿಕ ಬಿದರಿ, ರೇವಣ್ಣ ಸರವ, ವಾಮನ್ ಹಟ್ಟಿಮನಿ, ಮಾಯಪ್ಪ ಬನಶಂಕರಿ, ಭೀಮಪ್ಪ ಹಾಲ್ಗುಣಿ, ಸದಾಶಿವ ಸುತಾರ, ಕಲ್ಲಪ್ಪ ಮೇಳವಂಕಿ, ಅರ್ಚಕ ಬಾಬು ಗುರವ, ಕುರುಬ ಸಂಘದ ಅಧ್ಯಕ್ಷ ಶಿವಪುತ್ರ ಹಾಡುಕರ, ಗ್ರಾಪಂ ಅಧ್ಯಕ್ಷ ಕುಮಾರ ಬನಶಂಕರಿ, ರಾಮಣ್ಣ ಸಿರಗುರೆ, ಗೋಪಾಲ ಬಿದರಿ, ಗೋಪಾಲ ಹಂಜೆ, ದುಂಡಪ್ಪ ಹಾಲಾನಿ, ಶಿವಾಜಿ ಸುತಾರ, ಮಾಣಿಕ ಹಂಜೆ, ಆದಿನಾಥ ಹಂಜೆ, ಧನಪಾಲ ಚೌವ್ಹಾಣ, ಸಾವಂತ ಮಾಂಗ, ಭೀಮ ಮಾಂಗ, ಶಿವಪ್ಪ ಮಂಗ, ಉಮೇಶ ಭಜಂತ್ರಿ, ಮಾರುತಿ ಮಾಂಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net