ಕೂಡಿಗೆಯಲ್ಲಿ ಹನುಮ ಜಯಂತಿ ಪೂರ್ವಭಾವಿ ಸಭೆ

Hanuman Jayanthi pre-meeting at Kudige
Published on

ಕುಶಾಲನಗರ:

ಕೂಡಿಗೆ, ಮತ್ತು ಕೂಡುಮಂಗಳೂರು ಗ್ರಾಮದ ಹನುಮ ಸೇನಾ ಸಮಿತಿಯ ವತಿಯಿಂದ ಹನುಮ ಜಯಂತಿ ಆಚರಣೆಗೆ ಸಂಬAಧಿಸಿದAತೆ ಪೂರ್ವಭಾವಿ ಸಭೆ ಕೂಡುಮಂಗಳೂರು ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರ ನಡೆಯಿತು. ಸಮಿತಿಯ ಅಧ್ಯಕ್ಷ. ಕೆ.ಎಸ್. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ತಿಂಗಳಲ್ಲಿ ವರ್ಷಂಪ್ರತಿಯAತೆ ಆಚರಣೆ ಮಾಡುವ ಹನುಮ ಜಯಂತಿ ಆಚರಣೆಗೆ ಸಂಬAಧಿಸಿದAತೆ ಮತ್ತು ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ವಾರ್ಷಿಕ ರಥೋತ್ಸವ ಸಂದರ್ಭದ ಭಾಗವಹಿಸುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಈ ಸಂಧರ್ಭ ಚರ್ಚಿಸಲಾಯಿತು.

ಕೂಡಿಗೆ, ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವರ್ಷಂಪ್ರತಿಯAತೆ ಅದ್ದೂರಿಯಾಗಿ ಈ ಸಾಲಿನಲ್ಲೂ ಎರಡೂ ಗ್ರಾಮಗಳಿಗೆ ಒಂದೇ ಶೋಭಾಯಾತ್ರೆಯ ಹನುಮ ಮಂಟಪವನ್ನು ಹೊರತರುವ ಚಿಂತನೆಗಳ ಬಗ್ಗೆ ಹಾಜರಿದ್ದ ಯುವಕರ ತಂಡ, ಗ್ರಾಮಸ್ಥರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದರ ಅನುಗುಣವಾಗಿ ಅದ್ದೂರಿಯ ಶೋಭಾಯಾತ್ರೆಯ ವಿಗ್ರಹವನ್ನು ಸಿದ್ದ ಪಡಿಸುವ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದವು.

ಸಭೆಯಲ್ಲಿ ಕುಶಾಲನಗರ ಹನುಮ ಸೇವಾ ಸಮಿತಿಯ ದಶ ಮಂಟಪಗಳ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಉಪಾಧ್ಯಕ್ಷ ರೀಜೂ, ಕಾರ್ಯದರ್ಶಿ ಮಂಜುನಾಥ, ಸಹ ಕಾರ್ಯದರ್ಶಿ ಕೆ.ಪಿ. ರಾಜು, ಖಜಾಂಚಿ ಧರ್ಮ, ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್, ಮಧು, ತಿಲಕ್, ಕೇಶವ ರೈ, ಕೆ.ವಿ. ಬಸಪ್ಪ, ಅರುಣ್ ರಾವ್, ಅನಂತ, ಸುನಿಲ್ ರಾವ್, ಕೆ.ಜಿ ಅರುಣ್ ಕುಮಾರ್, ಸುಬ್ಬಯ್ಯ ಸೇರಿದಂತೆ ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಂಘಟನೆಯ ಪ್ರಮುಖರು, ಎರಡೂ ಗ್ರಾಮಗಳ ಯುವಕರು, ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net