ಹನುಮಾನ ದೇವರ ಜಾತ್ರೆ ಸಡಗರ

3Kabbur1
Published on

ಕಬ್ಬೂರ: ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ಶ್ರೀಹನುಮಾನ ದೇವರ ಜಾತ್ರಾ ಮಹೋತ್ಸವ ದೀಪಾವಳಿ ಅಮಾವಾಸ್ಯೆ ಹಾಗೂ ಪಾಡ್ಯ ನಿಮಿತ್ತ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸಂಚರಿಸುವಾಗ ಭಕ್ತರು ಹೂ, ಹಣ್ಣು, ಕಾಯಿ ಹಾಗೂ ಭಂಡಾರ, ನೈವೇದ್ಯ ಅರ್ಪಿಸಿದರು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ಭಂಡಾರದಲ್ಲಿ ಮಿಂದರು. ನಾಟಕ ಪ್ರದರ್ಶನ ಮತ್ತು ಆರ್ಕೆಸ್ಟ್ರಾ ನಡೆಯಿತು.

ಶಾಸಕರಾದ ದುರ್ಯೋಧನ ಐಹೊಳೆ, ಹುಕ್ಕೇರಿ ಶಾಸಕ ನಿಖಲ್ ಕತ್ತಿ ಹಾಗೂ ಪವನ ಕತ್ತಿ, ಪೃಥ್ವಿ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ, ಮಹಾವಿರ ಮೋಹಿತೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಯುವ ನಾಯಕ ರಾಹುಲ ಜಾರಕಿಹೋಳಿ, ಮಹೇಶ ಬೆಲ್ಲದ, ಸುರೇಶ ಬೆಲ್ಲದ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಮಂಗಿ, ಉಪಾಧ್ಯಕ್ಷ ಲಕ್ಷ್ಮೀ ಹನುಮಂತಗೋಳ, ಪಿಕೆಪಿಎಸ್ ಅಧ್ಯಕ್ಷ ಹನುಮಂತ ರಬಕವಿ, ಮಲ್ಲೇಶ ಹನುಮಂತಗೋಳ, ಶಿವರಾಯಿ ಸನದಿ, ಮಹಾಂತೇಶ ಶಿರಗೂರ, ಲಕ್ಷ್ಮಣ ಹನುಮನ್ನವರ, ಸಿದ್ದು ಖಿಂಡಿ, ಪಾಂಡುರಂಗ ಹನುಮನ್ನವರ, ಹನುಮಂತ ಕರಿಕಟ್ಟ್ಟಿ, ಮಾರುತಿ ಹಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net