

ಮೈಸೂರು: ಮೈಸೂರು ಹನುಮಂತೋತ್ಸವ ಸಮಿತಿ ವತಿಯಿಂದ ಡಿ.30 ರಂದು ಬೆಳಗ್ಗೆ 11.20ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ‘ಮೈಸೂರು ಹನುಮ ಹಬ್ಬ’ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸದಸ್ಯ ಸಂಜಯ್ ತಿಳಿಸಿದರು.
ಅಂದು ಆಂಜನೇಯಸ್ವಾಮಿ ಮುರ್ತಿಗಳೊಂದಿಗೆ ದೇವಸ್ಥಾನ ಆವರಣದಿಂದ ಮೆರವಣಿಗೆ ಹೊರಡಲಾಗುವುದು. ಮೆರವಣಿಗೆಯು ಅಶೋಕ ರಸ್ತೆ, ಇರ್ವಿನ್ ರಸ್ತೆ, ಸಯ್ಯಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿ ಗನ್‌ಹೌಸ್ ವೃತ್ತದ ಬಳಿ ಅಂತ್ಯಗೊಳ್ಳಲಿದೆ. ಮೆರವಣಿಗೆಗೆ ನಂದಿಕಂಬ, ವೀರಗಾಸೆ, ಕಂಸಾಳೆ ಸೇರಿದಂತೆ ವಿವಿಧ ಕಲಾತಂಡಗಳು ಮೆರಗು ನೀಡಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಜೀವನ್, ಕುಮಾರ್, ಅಭಿಲಾಷ್, ಮೋಹನ್, ಸಂತೋಷ್, ನಿತಿನ್ ಇದ್ದರು.