ಅ. 4ರಿಂದ ಹುನ್ನೂರಿನಲ್ಲಿ ಹನುಮಾನ ದೇವರ ಜಾತ್ರೆ

Hanuman Deva Fair in Hunnur from 4th
Published on

ಜಮಖಂಡಿ : ತಾಲೂಕಿನ ಹುನ್ನೂರು ಗ್ರಾಮದಲ್ಲಿ ಅ. 4 ಹಾಗೂ 5ರವರೆಗೆ ಶ್ರೀ ಹನುಮಾನ ದೇವರ ಪರ್ವದ (ಪರುವಿನ) ಜಾತ್ರಾ ಮಹೋತ್ಸವ ಜರುಗಲಿದೆ. ಅ. 4 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಹನುಮಾನ ದೇವರಿಗೆ ಮಹಾ ಪಂಚಾಮೃತ ಅಭಿಷೇಕ ಜರುಗುವುದು. 10 ಗಂಟೆಗೆ ಪುರುಷರಿಗಾಗಿ ಮುಕ್ತ ಟ್ರ್ಯಾಕ್ಟರ್​ ಜಗ್ಗುವ ಸ್ಪರ್ಧೆ, ಸಂಜೆ 5 ಗಂಟೆಗೆ ಗೋಪಾಲ ಬುಟ್ಟಿ ತುಂಬುವುದು. ನಂತರ ಅನ್ನಪ್ರಸಾದ ಜರಗುವುದು ರಾತ್ರಿ 10 ಶ್ರೀ ಕಾಶಿಲಿಂಗೇಶ್ವರ ಹಾಗೂ ಶ್ರೀ ಬೀರಸಿದ್ಧೇಶ್ವರ ಡೊಳ್ಳಿನ ಗಾಯನ ಸಂ ಹುನ್ನೂರ. ಇವರಿಂದ ಡೊಳ್ಳಿನ ಪದಗಳು ನಡೆಯಲಿವೆ. ಅ.5 ರಂದು ರಾತ್ರಿ 10 ಗಂಟೆಗೆ "ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ' ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

ಹುನ್ನೂರ ಶ್ರೀ ಹನುಮಾನ ದೇವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net