

ಮುಗಳಿಹಾಳ: ಸಮೀಪದ ಕೊಡ್ಲಿವಾಡ ಗ್ರಾಮದ ಕುರಿ ಕಾಯುವವನ ಮಗ ಹನುಮಂತ ನಂದಿ ಯುಪಿಎಸ್ಸಿ ಪರೀೆಯಲ್ಲಿ 910ನೆಯ ರ್ಯಾಂಕ್ ಪಡೆದು ಸಾಧನೆ ಮಾಡಿರುವುದು ಕ್ಷೇತ್ರಕ್ಕೆ ಹೆಮ್ಮೆ ತಂದಿದೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ಸಾಧಕ ಹಣಮಂತನನ್ನು ಭೇಟಿಯಾಗಿ ಸನ್ಮಾನಿಸಿ ಮಾತನಾಡಿದ ಅವರು, ನಮ್ಮ ಸವದತ್ತಿ ಯಲ್ಲಮ್ಮ ೇತ್ರದ ಯುಪಿಎಸ್ಸಿ ಸಾಧಕ ಹನುಮಂತನ ಭವಿಷ್ಯ ಉಜ್ವಲವಾಗಿ ಉನ್ನತ ಹುದ್ದೆ ಅಲಂಕರಿಸಲಿ ಎಂದು ಹರಿಸಿದರು. ನನ್ನ ೇತ್ರದ ಬಡವಿದ್ಯಾರ್ಥಿಗಳು ಪ್ರತಿಭಾವಂತರು ಅನ್ನೋದಕ್ಕೆ ಹನುಮಂತನೇ ಸಾ. ಮಕ್ಕಳಿಗೆ ಹನುಮಂತನನ್ನು ಮಾದರಿಯನ್ನಾಗಿಸಿ ಶಿಣಕ್ಕೆ ಪ್ರಾಮುಖ್ಯ ನೀಡಬೇಕು. ಪಾಲಕರು ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ತಿಳಿಸಿದರು. ಸವದತ್ತಿ ಕಾಂಗ್ರೆಸ್ ಮುಖಂಡ ಅಶ್ವತ್ಥ ವೆದ್ಯ, ಪ್ರಕಾಶ ವಾಲಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಯರಗಟ್ಟಿ ಎಪಿಎಂಸಿ ಅಧ್ಯ ನೀಲಕಂಠ ಶಿದ್ದಬಸನ್ನವರ, ಯರಗಟ್ಟಿ ಪಪಂ ಸದಸ್ಯ ನಿಖಿಲ ಪಾಟೀಲ ಇತರರು ಇದ್ದರು.