ಸಮರ್ಪಣಾ ಭಾವದ ಸೇವೆಯಿಂದ ಯಶಸ್ಸು : ಕುಂಟಾರು ರವೀಶ ತಂತ್ರಿ ವಿಶ್ವಾಸ

15
Published on

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ

ಸಮರ್ಪಣಾ ಭಾವದಿಂದ ಜವಾಬ್ದಾರಿ ನಿರ್ವಹಿಸಿದರೆ ಯಶಸ್ಸು ನಿಶ್ಚಿತ. ಆ ಮೂಲಕ ಬ್ರಹ್ಮಕಲಶೋತ್ಸವವನ್ನು ದೇಶಕ್ಕೆ ಮತ್ತು ಹಿಂದು ಸಮಾಜಕ್ಕೆ ಇನ್ನಷ್ಟು ಶಕ್ತಿ ನೀಡುವ ಕಾರ್ಯಕ್ರಮವನ್ನಾಗಿಸಬೇಕು ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.

ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ಏ.9ರಿಂದ 12ರ ತನಕ ನಡೆಯಲಿರುವ ಕೋಡಂಡರಾಮ ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಭಾನುವಾರ ಹನುಮಗಿರಿ ವೈದೇಹಿ ಸಭಾಭವನದಲ್ಲಿ ಸಮಾಲೋಚನಾ ಸಭೆ ಮತ್ತು ವಿವಿಧ ಸಮಿತಿಗಳ ರಚನಾ ಸಭೆಯಲ್ಲಿ ಮಾರ್ಗದರ್ಶನ ನೀಡಿದರು.

ನಿಕಟಪೂರ್ವ ಸಂಸದ, ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಅರುಣ್ ಕುಮಾರ್ ಪುತ್ತಿಲ, ಕಾವು ಹೇಮನಾಥ ಶೆಟ್ಟಿ, ಮುರಳಿಕೃಷ್ಣ ಹಸಂತಡ್ಕ, ಶ್ರೀಕಾಂತ್ ಕಾಸರಗೋಡು, ಪ್ರವೀಣ್ ಸರಳಾಯ, ಆರ್.ಸಿ.ನಾರಾಯಣ ರೆಂಜ, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಗಿರಿಶಂಕರ ಸುಲಾಯ ಮತ್ತಿತರರಿದ್ದರು.

ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ್ ಪಿ. ಈಶ್ವರಮಂಗಲ ಸ್ವಾಗತಿಸಿದರು. ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ವಂದಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾಗಿ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ ಬಳಜ್ಜ, ಎಸ್.ಎನ್.ಮನ್ಮಥ, ವಿಶ್ವೇಶ್ವರ ಭಟ್ ಬಂಗಾರಡ್ಕ, ಅರುಣ್ ಕುಮಾರ್ ಪುತ್ತಿಲ, ಚನಿಲ ತಿಮ್ಮಪ್ಪ ಶೆಟ್ಟಿ, ಜಯಂತ ನಡುಬೈಲು, ಕಾವು ಹೇಮನಾಥ ಶೆಟ್ಟಿ, ಡಾ.ಸುರೇಶ್ ಪುತ್ತೂರಾಯ, ವಾಸು ಪೂಜಾರಿ ಗುಂಡ್ಯಡ್ಕ, ಶ್ರೀಕಾಂತ್ ಕಾಸರಗೋಡು, ಬೂಡಿಯಾರ್ ರಾಧಾಕೃಷ್ಣ ರೈ, ಕೇಶವ ಮುಳಿಯ ಸುಳ್ಯ, ಜೀವಂಧರ್ ಜೈನ್, ಹರೀಶ್ ಕಂಚಿಪಿಲಿ, ಭಾಮಿ ಅಶೋಕ್ ಶೆಣೈ, ರವಿಕಿರಣ ಶೆಟ್ಟಿ ಬೆದ್ರಾಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಸುಬ್ಬಪ್ಪ ಪಟ್ಟೆ, ಗಿರಿಧರ್ ಶೆಟ್ಟಿ, ರಾಜೇಶ್ ಬನ್ನೂರು, ಆರ್.ಸಿ.ನಾರಾಯಣ ರೆಂಜ, ಸವಿತಾ ರೈ ನೆಲ್ಲಿತ್ತಡ್ಕ, ಪೂರ್ಣಚಂದ್ರ ನೆಲ್ಲಿತ್ತಡ್ಕ, ಕಾರ್ಯದರ್ಶಿಗಳಾಗಿ ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ದೀಪಕ್ ಮುಂಡ್ಯ, ಚಿನ್ಮಯ ರೈ ನಡುಬೈಲು, ಶ್ರೀನಿವಾಸ ಭಟ್ ಚಂದುಕೂಡ್ಲು, ಮಹಾಲಿಂಗ ಪಂಚೋಡಿ, ಪ್ರಕಾಶ್ ಕೈಕಾರ, ಚಂದ್ರಶೇಖರ್ ಆಳ್ವ, ಶಿವರಾಮ ಭಟ್ ಬೀರ್ಣಕಜೆ, ಲಿಂಗಪ್ಪ ಗೌಡ, ಪ್ರಶಾಂತಿ ರೈ ಕುತ್ಯಾಳ, ಸೌಮ್ಯಾ ಗಜಾನನ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net