ಹನುಮ ಮಾಲಾಧಾರಿಗಳಿಗೆ ಇರುಮುಡಿ

Kampli Irumudi
ಕಂಪ್ಲಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹನುಮ ಮಾಲಾಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ಜರುಗಿತು. ಪ್ರಮುಖರಾದ ತಾತಯ್ಯ ಗುರುಸ್ವಾಮಿ, ಮಾಲಾಧಾರಿಗಳಾದ ಸುನೀಲ್, ಪ್ರೇಮ್, ಮಂಜುನಾಥ ಚಂದ್ರು ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಕೊಟ್ಟಾಲ್ ರಸ್ತೆಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಶ್ರೀ ಹನುಮ ಮಾಲಾ ಸೇವಾ ಸಮಿತಿಯ ಮಾಲಾಧಾರಿಗಳಿಗೆ ಇರುಮುಡಿ ಕಟ್ಟುವ ಕಾರ್ಯಕ್ರಮ ಜರುಗಿತು.

ಗಂಗಾವತಿಯ ತಾತಯ್ಯ ಗುರುಸ್ವಾಮಿ ಪೌರೋಹಿತ್ಯದಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಇರುಮುಡಿ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.

ಸಂಜೆ ಇರುಮುಡಿ ಹೊತ್ತ ಹನುಮ ಮಾಲಾಧಾರಿಗಳು ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳಿದರು. ಹನುಮ ಮಾಲಾಧಾರಿಗಳಾದ ಸುನೀಲ್, ಪ್ರೇಮ್, ಮಂಜುನಾಥ ಚಂದ್ರು, ಮದನ್, ಸಂದೀಪ್, ಕೃಷ್ಣ, ಕೆ.ಮುತ್ತಣ್ಣ, ವಿನಾಯಕ, ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net