ಭರತನಾಟ್ಯದಲ್ಲಿ ಶಿವಲೀಲಾ ಪ್ರಥಮ

BHARATHA NATYA
ಹನುಮಸಾಗರದ ಶಿವಲೀಲಾ ಹಿರೇಮಠ ಭರತನಾಟ್ಯ ಪ್ರದರ್ಶಿಸುತ್ತಿರುವುದು.
Published on

ಹನುಮಸಾಗರ: ಪಟ್ಟಣದ ಶಿವಲೀಲಾ ಶಿವಕುಮಾರ ಹಿರೇಮಠ ಕುಷ್ಟಗಿಯಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಭರತ ನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಇವರ ತಂದೆ ಹನುಮಸಾಗರ ಠಾಣೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿನಿಯು ನಿಡಶೇಸಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಪ್ರಾಚಾರ್ಯ ಕಾಶಿಬಾಯಿ ಎಂ., ನಿಲಯ ಮೇಲ್ವಿಚಾರಕ ಬಂಡೆಪ್ಪ ಗೌಡರ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net