ಉತ್ತಮ ಮಳೆ-ಬೆಳಗಾಗಿ ಪ್ರಾರ್ಥಿಸಿ ಪೂಜೆ

Rain and Morning Pooja
ಹನುಮಸಾಗರ ಸಮೀಪದ ಕೊಡತಗೇರಿ ಗ್ರಾಮದಲ್ಲಿ ಶ್ರೀ ದ್ಯಾಮಾಂಭಿಕ ದೇವಿಗೆ ಉಡಿ ತುಂಬಲಾಯಿತು. ಮುಖಂಡರಾದ ಶರಣಪ್ಪ ಪೂಜಾರ, ತಿಪ್ಪನಗೌಡ ಗೌಡ್ರ, ಮಲ್ಲಪ್ಪ ಪೋಲೆಶಿ, ನೀಲಪ್ಪ ದ್ಯಾಮಣ್ಣವರ, ಕುಮಾರ ಪೂಜಾರ, ಹನಮಪ್ಪ ದ್ಯಾಮಣ್ಣವರ, ಗೌಡಪ್ಪ ಅಂಗಡಿ, ನೀಲಪ್ಪ ಎಸ್.ದ್ಯಾಮಣ್ಣವರ, ಯಲ್ಲಪ್ಪ ಆಡಿನ್, ಹನಮಗೌಡ ಹುಲ್ಯಾಳ, ಹನಮಪ್ಪ ಕುರಟ್ಟಿ, ನೀಲಪ್ಪ ಹಟ್ಟಿಯವರ ಇತರರಿದ್ದರು.
Published on

ಹನುಮಸಾಗರ: ಸಮೀಪದ ಕೊಡತಗೇರಿ ಗ್ರಾಮದಲ್ಲಿ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಗ್ರಾಮದೇವತೆ ಶ್ರೀ ದ್ಯಾಮಾಂಭಿಕ ದೇವಿಗೆ ಮಂಗಳವಾರ ಉಡಿ ತುಂಬಿದರು.

ಗ್ರಾಮದ ಶರಣಪ್ಪ ಪೂಜಾರ, ಅರ್ಜುನಗೌಡ ಗೌಡ್ರ, ನಿಂಗಪ್ಪ ಪೋಲೇಶಿ, ಮಲ್ಲಪ್ಪ ಆಡಿನ್, ಅಂದಾನಗೌಡ ಗೌಡ್ರ ಮನೆಯಿಂದ ಕಳಸದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ, ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಐದು ವಾರದ ದಿನ ಗ್ರಾಮದಲ್ಲಿ ಕುಟ್ಟುವುದು, ಬೀಸುವುದು ಸೇರಿ ವಿವಿಧ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಶ್ರೀ ದೇವಿಗೆ ಉಡಿ ತುಂಬಿದ ಬಳಿಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುವುದು ಬಹುದಿನಗಳಿಂದ ನಡೆಸಿಕೊಂಡು ಬಂದ ಸಂಪ್ರದಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net