ಮಿನಿಜೋಗ ಕಪಿಲತೀರ್ಥಕ್ಕೆ ಜೀವಕಳೆ

Kapila Tirtha Waterfalls
ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ಕಪಿಲತೀರ್ಥ ಜಲಪಾತದಲ್ಲಿ ನೀರು ಧುಮ್ಮಿಕ್ಕುತ್ತಿರುವುದು.
Published on

ಹನುಮಸಾಗರ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಹಾಗೂ ಭಾನುವಾರ ರಾತ್ರಿ ಸುರಿದ ಮಳೆಗೆ ಬತ್ತಿ ಹೋಗಿದ್ದ ಸಮೀಪದ ಕಪಿಲತೀರ್ಥ ಜಲಪಾತಕ್ಕೆ ಜೀವ ಕಳೆ ಬಂದಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಕಬ್ಬರಗಿ ಗ್ರಾಮದ ಕಪಿಲತೀರ್ಥ ಜಲಪಾತ ಮಿನಿಜೋಗವೆಂದು ಹೆಸರು ಪಡೆದಿದ್ದು, ಕಲ್ಯಾಣ ಕರ್ನಾಟಕದ ಏಕೈಕ ಜಲಪಾತ ವಾಗಿದೆ. ಬೇಸಿಗೆಯಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದ ಜಲಪಾತದಲ್ಲಿ ಸೋಮವಾರದಿಂದ ನೀರು ಧುಮ್ಮಿಕ್ಕುತ್ತಿದೆ. ಬೆಟ್ಟದ ತಪ್ಪಲಿನಲ್ಲಿ 25 ಅಡಿ ಎತ್ತರದಿಂದ ಬೀಳುವ ನೀರಿನ ಕೆಳಗೆ ನಿಂತು ಸ್ನಾನ ಮಾಡಿ, ಮಜಾ ಪಡೆಯಲು ಕೊಪ್ಪಳ ಸೇರಿ ಸುತ್ತಮುತ್ತಲಿನ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಾರೆ.

ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಹಾಸು ಬಂಡೆಯನ್ನು ನಿರ್ಮಿಸಿರುವುದರಿಂದ ಬಂಡೆಗೆ ಅಪ್ಪಳಿಸಿದ ನೀರು ಪಕ್ಕದಲ್ಲಿ ನಿಂತ ಜನರಿಗೆ ಚಿಮ್ಮಿ ಹಿತಾನುಭವ ನೀಡುತ್ತಿದೆ. ಭೋರ್ಗೆರೆದು ಬೀಳುವ ನೀರು ನೋಡುಗರ ಕಣ್ಮನ ತಣಿಸುತ್ತಿದೆ. ಸದ್ಯ ಧುಮ್ಮಿಕ್ಕುತ್ತಿರುವ ಜಲಪಾದಲ್ಲಿ ಮೈಯೊಡ್ಡಲು ಪ್ರವಾಸಿಗರು ಕಾತರದಿಂದ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net