ಬಸವಾಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ

13ark-3
Published on

ಅರಕಲಗೂಡು : ತಾಲೂಕಿನ ಬಸವಾಪಟ್ಟಣದಲ್ಲಿ ಎರಡನೇ ವರ್ಷದ ಹನುಮ ಜಯಂತಿಯನ್ನು ಶನಿವಾರ ಅತ್ಯಂತ ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಮಹಾ ಮಂಗಳಾರತಿ ಸೇವೆ ಸಲ್ಲಿಸಲಾಯಿತು. ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬಳಿಕ ಅಲಂಕೃತ ಬೆಳ್ಳಿ ಸಾರೋಟ್ ಮೇಲೆ ಆಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವೈಭವದ ಮೆರವಣಿಗೆಗೆ ನಡೆಸಲಾಯಿತು. ಪ್ರಮುಖ ಬೀದಿಗಳಲ್ಲಿ ಹನುಮನ ವೇಷಧಾರಿಗಳು ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು. ಭಕ್ತರು ಹನುಮ, ಹಾಗೂ ಶ್ರೀರಾಮನ ಜಯಘೋಷಗಳನ್ನು ಮೊಳಗಿಸಿದರು. ಡಿಜಿ ಹಾಡಿಗೆ ಯುವಕರು ಕುಣಿದು ಸಂಭ್ರಮಿಸಿದರು.
ಮುಖಂಡರಾದ ವೀರೇಶ್, ರಮೇಶ್, ವಾಗೀಶ್, ಮಹೇಶ್, ಸುನಿಲ್, ಯಶ್ವಂತ್, ವಿಕಾಸ್, ಕಿರಣ್, ನಂದೀಶ್, ಮೋಹನ್, ವಿನಯ್, ರಾಜು, ಮಂಜು, ಕುಮಾರ್, ನಿಕಿತ್, ಶಶಾಂಕ್, ಯೋಗೇಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net