ಹನುಮನ ಪಲ್ಲಕ್ಕಿ ಉತ್ಸವ ಸಂಪನ್ನ: ಕೂಡ್ಲಿಗಿಯಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೂ ಪೂಜೆ

161221 Kudligi Hanuma Jayanti Puneeth Pooja
ಹನುಮ ಜಯಂತಿ ಅಂಗವಾಗಿ ಕೂಡ್ಲಿಗಿಯಲ್ಲಿ ಗುರುವಾರ ಹನುಮ ಮಾಲಾಧಾರಿಗಳು ಕೇಸರಿ ಧ್ವಜದೊಂದಿಗೆ ಪಲ್ಲಕ್ಕಿಯಲ್ಲಿ ಹನುಮನ ಮೂರ್ತಿಯ ಜತೆ ನಟ ಪುನೀತ್ ರಾಜಕುಮಾರ್ ಭಾವಚಿತ್ರ ಹಿಡಿದು ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.
Published on

ಕೂಡ್ಲಿಗಿ: ಹನುಮ ಜಯಂತಿ ಅಂಗವಾಗಿ ಪಟ್ಟಣದ ಆರಾಧ್ಯ ದೈವ ಕೊತ್ತಲ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರವಲಯದ ವಜ್ರಮುಷ್ಠಿ ಆಂಜನೇಯ ದೇವಸ್ಥಾನದವರೆಗೂ ಹನುಮನ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

ಹನುಮ ವ್ರತ ಆಚರಿಸುತ್ತಿರುವ ಮಾಲಾಧಾರಿಗಳು ಗುರುವಾರ ವಜ್ರಮುಷ್ಠಿ ಆಂಜನೇಯಗೆ ಹೋಮ-ಹವನ ಕೈಗೊಂಡರು. ನಂತರ ವಿಶೇಷ ಪೂಜೆ ಮಾಡಿ, ವಿವಿಧ ಹೂಗಳಿಂದ ಸಿಂಗರಿಸಿದರು. 11 ಗಂಟೆಯಿಂದ ಪಟ್ಟಣದ ಆರಾಧ್ಯ ದೈವ ಕೊತ್ತಲ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಹನುಮನ ಪ್ರತಿಷ್ಠಾಪಿಸಿ, ಪಲ್ಲಕ್ಕಿ ಹೊತ್ತ ಮಾಲಾಧಾರಿಗಳು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿದರು. ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net