

ಸಾಲಿಗ್ರಾಮ: ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಭಗೀರಥ ಉಪ್ಪಾರ ಸಂಘದ ವತಿಯಿಂದ ಶ್ರೀ ಅಜ್ಜಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಹನುಮ ಜಯಂತ್ಯುತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಆಂಜನೇಯ ವಿಗ್ರಹಕ್ಕೆ ವಿಶೇಷ ಅಲಂಕಾರದೊಂದಿಗೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ, ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಶಿವಣ್ಣ, ಕೃಷ್ಣೇಗೌಡ, ಚಿಕ್ಕೇಗೌಡ, ಲಕ್ಷ್ಮಣ, ಕೆ.ಟಿ.ಶಿವಣ್ಣ, ನಾಗರಾಜ, ಮೈಲಾರಿ, ಅಜ್ಜೇಗೌಡ, ಕೆ.ಟಿ.ಮೋಹನ್ ಕುಮಾರ್, ಕೆ.ಸ್ವಾಮಿ, ಮಧು, ಕೆ.ಎನ್.ಪವನ್, ಸಚಿನ್, ಚಂದ್ರು, ಆನಂದ, ಮುರಳಿ, ಲಕ್ಷ್ಮಣ, ನಾಗಣ್ಣ, ಸುರೇಶ, ಹರ್ಷ, ಪವನ್, ಲಿಖಿತ್ ಸೇರಿದಂತೆ ಹಲವರು ಇದ್ದರು.