ಹನುಮ ಜಯಂತಿಗೆ ಕೂಡಿಗೆಯಲ್ಲಿ ಸಿದ್ಧತೆ

hanuma jayanthi
Published on

ಕುಶಾಲನಗರ:

ಕುಶಾಲನಗರದಲ್ಲಿ ನಡೆಯುವ ಬೃಹತ್ ಹನುಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕೂಡಿಗೆ - ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಹನುಮಸೇನಾ ಸೇವಾ ಸಮಿತಿ ಟ್ರಸ್ಟ್ ಇವರ ವತಿಯಿಂದ 3ನೇ ವರ್ಷದ ಬೃಹತ್ ಶೋಭಯಾತ್ರೆಗೆ ಕೂಡಿಗೆಯಲ್ಲಿ ಭರದ ಸಿದ್ದತೆಗಳು ನಡೆಯುತ್ತಿವೆ.

ಬೃಹತ್ ಶೋಭಯಾತ್ರೆ ಅಂಗವಾಗಿ ಡಿ. 13 ರಂದು ಮಧ್ಯಾಹ್ನ 12 ಗಂಟೆಗೆ ಕೂಡಿಗೆಯ ಗಣಪತಿ ಪೆಂಡಾಲ್‌ನಲ್ಲಿ ಅನ್ನಸಂರ್ತಪಣೆ, ನಂತರ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಉತ್ಸವ ಮೂರ್ತಿಯ ಶೋಭಯಾತ್ರೆಯು ಅತ್ಯಾಕರ್ಷಕ ಡಿ.ಜೆ. ವಾದ್ಯ ವೃಂದದೊAದಿಗೆ ಹಾಗೂ ಆಕರ್ಷಕ ವಿವಿಧ ಕಲಾ ತಂಡದ ಪ್ರದರ್ಶನಗಳೊಂದಿಗೆ ಹಾಸನ ಹೆದ್ದಾರಿಯ ಮೂಲಕ ಹೊರಟು ಕೂಡಿಗೆ - ಕೂಡುಮಂಗಳೂರು ಮತ್ತು ಕೂಡ್ಲೂರು ಮಾರ್ಗವಾಗಿ ಪ್ರಮುಖ ರಾಜ್ಯ ಹೆದ್ದಾರಿ ಬೀದಿಯ ಮೂಲಕ ಸಾಗಿ ಕುಶಾಲನಗರದಲ್ಲಿ ನಡೆಯುವ ಅದ್ದೂರಿ ಹನುಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕೂಡಿಗೆ - ಕೂಡುಮಂಗಳೂರು ಭಾಗದಿಂದ ಬೃಹತ್ ಶೋಭಾ ಯಾತ್ರೆ ಪಾಲ್ಗೊಳ್ಳುವುದು ಎಂದು ಸಮಿತಿ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

ಶೋಭಯಾತ್ರೆ ಅಂಗವಾಗಿ ಸಮಿತಿಯ ಯುವಕರು ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು ಗ್ರಾಮ ವರೆಗಿನ ಹೆದ್ದಾರಿಯ ಎರಡೂ ಬದಿಗಳಲ್ಲಿ ಕೇಸರಿ ಬಣ್ಣದ ಬಂಟಿAಗ್ಸ್ಗಳಿAದ ಗ್ರಾಮವನ್ನು ಸಿಂಗಾರ ಮಾಡಲಾಗುತ್ತಿದೆ. ಶೋಭಯಾತ್ರೆಗೆ ಸಂಬAಧಿಸಿದ ಬೃಹತ್ ಕಲಾಕೃತಿಯ ವಿಗ್ರಹದ ಚಲನಾವಲನ ಮತ್ತು ಅದಕ್ಕೆ ಸಂಬAಧಿಸಿದ ಭಕ್ತಿ ಗೀತೆಗಳ ಅಳವಡಿಕೆಯ ಕಾರ್ಯ ಸಮಿತಿ ವತಿಯಿಂದ ನಡೆಯುತ್ತಿದೆ ಎಂದು ಕಾರ್ಯದರ್ಶಿ ಮಂಜುನಾಥ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net