ಹನುಮ ಜಯಂತಿ ನಾಳೆ

15ss1hanumajayanti ge siddate
ಹಿಂದು ಜಾಗಾರಣ ವೇದಿಕೆ ವತಿಯಿಂದ ಶನಿವಾರಸಂತೆಯ ಕೆಆರ್‌ಸಿ ವೃತ್ತದಲ್ಲಿ ಕೇಸರಿ ತೋರಣ ಕಂಗೊಳಿಸುತ್ತಿರುವುದು.
Published on

ಶನಿವಾರಸಂತೆ: ಹಿಂದು ಜಾಗರಣಾ ವೇದಿಕೆಯ ಶನಿವಾರಸಂತೆ ಮತ್ತು ಸೋಮವಾರಪೇಟೆ ಘಟಕ ವತಿಯಿಂದ ಡಿ.17 ರಂದು ಹನುಮ ಜಯಂತಿ ಮತ್ತು 2ನೇ ವರ್ಷದ ಅದ್ದೂರಿ ಶೋಭಾಯಾತ್ರೆ ಆಯೋಜಿಸಲಾಗಿದೆ.

ಹನುಮ ಜಯಂತಿ ಪ್ರಯುಕ್ತ ಡಿ.17 ರಂದು ಸಂಜೆ 4.30ಕ್ಕೆ ಪಟ್ಟಣದ ತ್ಯಾಗರಾಜ ಕಾಲನಿಯ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಮುಖ್ಯ ರಸ್ತೆ ಮಾರ್ಗವಾಗಿ ಗುಡುಗಳಲೆಯ ಬಸವೇಶ್ವರ ದೇವಾಲಯ ತಲುಪಲಿದ್ದು, ಬಳಿಕ ಪಟ್ಟಣದ ಬೈಪಾಸ್ ರಸ್ತೆ ಮಾರ್ಗವಾಗಿ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿಮಂಟಪವನ್ನು ಶೋಭಾಯಾತ್ರೆ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ರಾತ್ರಿ 8 ಗಂಟೆಯಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ವತಿಯಿಂದ ಈಗಾಗಲೇ ಪಟ್ಟಣದ ಕೆಆರ್‌ಸಿ ವೃತ್ತ ಸುತ್ತಮುತ್ತ ಕೇಸರಿ ತೋರಣ ಕಂಗೊಳಿಸುತ್ತಿದ್ದು, ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net