ಹನುಮ ಮಾಲೆ ಧಾರಣೆ

Untitled design
ವಂದಲಿ ಬಲಭೀಮ ದೇವಸ್ಥಾನದಲ್ಲಿ ರಥೋತ್ಸವ ಭಾನುವಾರ ನಡೆಯಿತು.
Published on

ಹಟ್ಟಿಚಿನ್ನದಗಣಿ: ಸಮೀಪದ ವಂದಲಿ ಬಲಭೀಮ ದೇವಸ್ಥಾನದಲ್ಲಿ ಭಾನುವಾರ ಶ್ರೀಮದ್ ಹನುಮದ್‌ವ್ರತ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ಪಂಚಾಮೃತ ಅಭಿಷೇಕ, ಕೇಸರಿ ಲೇಪನ, ಎಲೆಪೂಜೆ, ಹನುಮದ್‌ವ್ರತ ಪೂಜೆ, ಹನುಮ ಮಾಲೆ ಧಾರಣೆ ಶ್ರೀಸತ್ಯನಾರಾಯಣ ಪೂಜೆ, ರಥೋತ್ಸವ ಅದ್ದೂರಿಯಾಗಿ ಜರುಗಿತು. ಹಟ್ಟಿಚಿನ್ನದಗಣಿಯ ಸಂಗೀತ ಶಿಕ್ಷಕಿ ಶುಭಾ ಸಂಜೀವ್‌ರಾವ್ ಕುಲಕರ್ಣಿ ಹಾಗೂ ಬಸವರಾಜ್ ಹೂಗಾರ್‌ರಿಂದ ದಾಸವಾಣಿ ಮತ್ತು ಸಿತಾರ್‌ವಾದನ ನಡೆಯಿತು. ಮಾಧವಾಚಾರ್ಯ ಜೋಷಿ ಸುರಪುರ, ನರಸಿಂಹಾಚಾರ್ಯ ಜೋಷಿ ಲಿಂಗಸುಗೂರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಸರ್ವ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net