

ಅಣ್ಣಿಗೇರಿ: ಕರ್ನಾಟಕ ಜಾನಪದ ಪರಿಷತ್ತು, ಧಾರವಾಡ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತು, ಧಾರವಾಡ ಜಿಲ್ಲೆ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ (ರಿ) ಹುಬ್ಬಳ್ಳಿ, ಜೀವಿ ಕಲಾ ಬಳಗ ಹುಬ್ಬಳ್ಳಿ ಹಾಗೂ ಅಣ್ಣಿಗೇರಿ ಜನತೆಯ ಸಯೋಗದಲ್ಲಿ ಮನೆಮನೆಯಲ್ಲಿ ಶ್ರಾವಣ ಜಾನಪದ ಕಾರ್ಯಕ್ರಮವು ಜರುಗಿತು.
ಜಾನಪದ ತಜ್ಞ ಹಾಗೂ ಧಾರವಾಡ ಜಿಲ್ಲಾ ಜಾನಪದ ಅಧ್ಯಕ್ಷ ಡಾ.ರಾಮು ಮೂಲಗಿ, ನಮ್ಮ ಹಿಂದಿನ ಪರಂಪರೆಗಳಾದ ಹಂತಿ ಪದ, ಗೀಗೀ ಪದ ಹಾಗೂ ನಮ್ಮ ರೈತರು ಕೆಲಸ ಮಾಡುವಾಗ ಜಾನಪದ ಹಾಡುಗಳನ್ನು ಹಾಡುವ ಮೂಲಕ ಜನರಿಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಜನಪದ ಶ್ರಾವಣ ಕಾರ್ಯಕ್ರಮದಲ್ಲಿ ಜನರಿಗೆ ಮನದಟ್ಟಾಗುವಂತೆ ಹೇಳಿದರು.
ಅತಿಥಿ ಶಿವಶಂಕರ ಕಲ್ಲೂರು ಮಾತನಾಡಿದರು.
ಇದೇ ವೇಳೆ ಅಣ್ಣಿಗೇರಿ ತಾಲೂಕು ಜಾನಪದ ಸಾಹಿತ್ಯ ಪರಿಷತ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಈರಪ್ಪ ಗುರಿಕಾರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ವಿ.ಎಂ. ಹಿರೇಮಠ, ಎನ್.ಎಸ್. ಮೇಲ್ಮರಿ, ಕೆ.ಪಿ. ಗುರಿಕಾರ, ದೇವರಾಜ ನಾವಳ್ಳಿ, ಮುಜಾವರ, ಮಹಮ್ಮದ್ ರಫಿಕ್ ಮುಳಗುಂದ, ಶಿಕ್ಷಕರಾದ ಈರಣ್ಣ ಅಕ್ಕಿ, ಹುಸೇನ ಬೆಟಗೇರಿ ಇದ್ದರು.