ಹಂತಿ ಕಟ್ಟಿ ಜೋಳದ ರಾಶಿ ರೂಪಕ ಪ್ರದರ್ಶನ

Hanthi, Maize Rashi, Metaphorical Performance, Devarhipparagi, Veerabhadreshwar Kartikotsava, Kalaburagi Sharanbasaveshwar, Traditional Farming System, Basavanbagewadi,
ದೇವರಹಿಪ್ಪರಗಿ ಪಟ್ಟಣದಲ್ಲಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ರೈತರು ಹಂತಿ ಕಟ್ಟಿ ಜೋಳದ ರಾಶಿ ಮಾಡುವ ರೂಪಕ ಅನಾವರಣ ಮಾಡಲಾಯಿತು. ಸಿ.ಕೆ.ಕುದರಿ, ಗುರುಬಸಪ್ಪ ಹಳಿಮನಿ, ಶ್ರೀಶೈಲ ದೇಸಾಯಿ, ನಿಂಗಪ್ಪ ಹಳಿಮನಿ, ರಾಮಗೊಂಡ ಅವುಟಿ ಇತರರಿದ್ದರು.
Published on

ದೇವರಹಿಪ್ಪರಗಿ: ಪುರಾಣ ಕೇವಲ ಆಧ್ಯಾತ್ಮಿಕ, ಧಾರ್ಮಿಕ ಆಚಾರ ವಿಚಾರಗಳಿಗೆ ಸೀಮಿತವಲ್ಲ, ಜಾನಪದ ಜಗತ್ತಿನ ಸೊಗಡನ್ನು ಪರಿಚಯಿಸಬಲ್ಲದು ಎನ್ನಲು ಪಟ್ಟಣದಲ್ಲಿ ಭಾನುವಾರ ರೈತರ ಪ್ರದರ್ಶಿಸಿದ ಹಂತಿ ಕಟ್ಟಿ ಜೋಳದ ರಾಶಿ ಮಾಡುವ ರೂಪಕ ಸಾಕ್ಷಿಯಾಯಿತು.

ಪಟ್ಟಣದ ವೀರಭದ್ರೇಶ್ವರ ಕಾರ್ತಿಕೋತ್ಸವದ ಅಂಗವಾಗಿ 12 ದಿನ ಜರುಗಿದ ಕಲಬುರಗಿ ಶರಣಬಸವೇಶ್ವರ ಮಹಾಪುರಾಣ ಅಂಗವಾಗಿ ಶರಣ ಬಸವೇಶ್ವರ ಜೀವನದ ವಿವಿಧ ಘಟ್ಟಗಳನ್ನು ಪರಿಚಯಿಸುವಾಗ ಭಾನುವಾರ ನಾಡಿನ ಜಾನಪದ ಸಂಸ್ಕೃತಿಯ ಪ್ರತೀಕವಾದ ಹಂತಿ ಹಬ್ಬದ ರೂಪಕವನ್ನು ಪ್ರದರ್ಶನ ಮಾಡಲಾಯಿತು.

ಭಕ್ತರು, ರೈತರು, ಮಹಿಳೆಯರು ವಿವಿಧ ಹಂತಿಹಾಡುಗಳನ್ನು ಹಾಡಿದರು. ಹಂತಿ ಕಟ್ಟಿ ಜೋಳದ ರಾಶಿ ಮಾಡುವ ಮೂಲಕ ಸಾಂಪ್ರದಾಯಿಕ ಕೃಷಿ ಪದ್ಧತಿ ನೆನಪಿಸಿದರು. ಯುವ ಪೀಳಿಗೆಗೆ ಜಾನಪದ ಕೃಷಿ ವಿಧಾನ ಪರಿಚಯಿಸಲಾಯಿತು.

ಹಂತಿಹಬ್ಬದ ಎತ್ತುಗಳ ವೇಷದಾರಿಗಳು ನೋಡುಗರ ಗಮನ ಸೆಳೆದರು. ಪುರಾಣಿಕ ಬಸವನಬಾಗೇವಾಡಿಯ ಒಡೆಯರ ಹಿರೇಮಠದ ಶಿವಪ್ರಕಾಶ ಶ್ರೀಗಳ ಆಧ್ಯಾತ್ಮಿಕ ವಿಚಾರಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.

ಕಾರ್ತಿಕೋತ್ಸವ ಸಮಿತಿಯ ಅಧ್ಯಕ್ಷ ಸಿ.ಕೆ.ಕುದರಿ, ಗುರುಬಸಪ್ಪ ಹಳಿಮನಿ, ಶ್ರೀಶೈಲ ದೇಸಾಯಿ, ನಿಂಗಪ್ಪ ಹಳಿಮನಿ, ರಾಮಗೊಂಡ ಅವುಟಿ, ಅಪ್ಪಣ್ಣ ಹಡಗಲಿ, ಕಾಸಪ್ಪ ಸರೂರ, ಚನ್ನಯ್ಯ ಮಲ್ಲಿಕಾರ್ಜುನಮಠ, ಯಲಗೂರೇಶ ದೇವೂರ, ಕಾಸಣ್ಣ ಮಿಂಚನಾಳ, ಗೋಲ್ಲಾಳ ದಾನಗೊಂಡ, ಚನ್ನಪ್ಪ ದೇಸಾಯಿ, ಮಲ್ಲು ಸೌದಿ, ವಿನೋದ ನಾಶಿಮಠ, ನಿಂಬೆಣ್ಣಪ್ಪ ಧುತ್ತರಗಾಂವಿ, ಗುರಪ್ಪ ಸಜ್ಜನ, ಶ್ರೀಶೈಲ ಯಾಳಗಿ, ದಿನೇಶ ಪಾಟೀಲ, ಶರಣಪ್ಪ ಕುಳಗೇರಿ, ಶರಣಪ್ಪ ಕೋಟಿನ, ರಮೇಶ ಮಶಾನವರ, ರವಿ ಯಾಳಗಿ, ಬಾಬುಗೌಡ ಪಾಟೀಲ, ಪಿ.ಎಸ್.ಮಿಂಚನಾಳ, ಜೆ.ಆರ್.ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net