

ಬೈಲಹೊಂಗಲ: ಮಾನಸಿಕವಾಗಿ ನೊಂದಿದ್ದ ಮಹಿಳೆಯೋರ್ವಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಮಟೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಯಲ್ಲವ್ವ ಮಾರುತಿ ಭಜಂತ್ರಿ (36) ಮೃತ ಮಹಿಳೆ.
ಪತಿ ಮಾರುತಿ ಯಲ್ಲಪ್ಪ ಭಜಂತ್ರಿ, ಈತನ ಅಣ್ಣ ಬಾಬು ಯಲ್ಲಪ್ಪ ಭಜಂತ್ರಿ, ಬಾಬು ಪತ್ನಿ ಅಣ್ಣವ್ವ ಈ ಮೂವರು ಸೇರಿ ಯಲ್ಲವ್ವಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯಲ್ಲವ್ವಳ ತಾಯಿ ಚಂದ್ರವ್ವ ಫಕೀರಪ್ಪ ಭಜಂತ್ರಿ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಿದ್ದಾಳೆ.