ಪತ್ನಿಯ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ

Hang 24 Feb 20
Published on

ಕೊಕಟನೂರ: ಪತ್ನಿಯ ಕಿರುಕುಳ ತಾಳಲಾರದೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಆರ್.ಸಿ.ಪ್ಲಾಟ್ ಬಳಿಯ ಹಿಪ್ಪರಗಿ ಗದ್ದೆಯಲ್ಲಿ ಶನಿವಾರ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದ ಮುತ್ತಣ್ಣ ಶಂಕರೆಪ್ಪ ಹಿಪ್ಪರಗಿ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಹೆಸರಿಗೆ ಜಮೀನು ಮಾಡಿಕೊಡಬೇಕೆಂದು ಪತ್ನಿ ಕಳೆದ ಕೆಲ ದಿನಗಳ ಹಿಂದೆ ಮುತ್ತಣ್ಣನ ಜತೆ ವಾಗ್ವಾದ ನಡೆಸಿ ಮನೆಯಿಂದ ಹೊರನಡೆದಿದ್ದಳು.

ಶನಿವಾರ ಮರಳಿ ಮನೆಗೆ ಬಂದು, ಪತಿ ಜತೆಗೆ ಮತ್ತದೇ ಬೇಡಿಕೆ ಇಟ್ಟು ಮಾತಿಗೆ ಮಾತು ಬೆಳೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಬೇಸತ್ತ ಮುತ್ತಣ್ಣ, ಮನೆಯಿಂದ ಹೊರಹೋಗಿ ತನ್ನ ಗದ್ದೆಯಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net