ಮನೆ ಕಟ್ಟಲು ಬಿಡಲಿಲ್ಲ ಎಂದು ಸಿದ್ಧಾರೂಢ ಮಠದ ಗೇಟ್‌ಗೆ ನೇಣು ಬಿಗಿದುಕೊಂಡ ವ್ಯಕ್ತಿ

IMG-20221017-WA0008
Published on

ರಾಣೆಬೆನ್ನೂರ: ಮನೆ ಕಟ್ಟಿಕೊಳ್ಳುವ ವಿಚಾರವಾಗಿ ಮನನೊಂದ ವ್ಯಕ್ತಿಯೊಬ್ಬ ಸಿದ್ಧಾರೂಢ ಮಠದ ಗೇಟ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಖಂಡೇರಾಯನಹಳ್ಳಿಯಲ್ಲಿ ಸೋಮವಾರ ಸಂಭವಿಸಿದೆ.
ಮಂಜಪ್ಪ ನಾನಪ್ಪ ಲಮಾಣಿ (55) ನೇಣು ಬಿಗಿದುಕೊಂಡವರು.
ಈತ ಸಿದ್ಧಾರೂಢ ಮಠದ ಪಕ್ಕದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ. ಕೆಲ ವರ್ಷದ ಹಿಂದೆ ಉದ್ಯೋಗ ಅರಸಿಕೊಂಡು ಬೇರೆ ಊರಿಗೆ ಹೋಗಿದ್ದ. ಕೆಲ ದಿನದ ಹಿಂದೆ ಮರಳಿ ತನ್ನೂರಿಗೆ ಬಂದು ವಾಸವಾಗಿದ್ದ. ಆದರೆ, ತಾನಿದ್ದ ಗುಡಿಸಲಿನಲ್ಲಿ ಮನೆ ನಿರ್ಮಿಸಿಕೊಳ್ಳಲು ಅಕ್ಕಪಕ್ಕದ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದು ಮನನೊಂದಿದ್ದ.
ಇದೇ ಕಾರಣಕ್ಕೆ ಮಠದ ಗೇಟ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪುತ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net