ನೇಹಾ ಹತ್ಯೆಗೈದವರನ್ನು ಗಲ್ಲಿಗೇರಿಸಿ

Hang those killed by Neha
ವಿಜಯಪುರದಲ್ಲಿ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕಾರ್ಯಕರ್ತರು ನೇಹಾ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಲಕ್ಷ್ಮಣ ಕಂಭಾಗಿ, ಜಗದೇವ ಸೂರ್ಯವಂಶಿ, ಗಿರಿಶ ಕಲಟಗಿ, ಸಂಕೇತ ಪಟ್ಟಣದ ಮತ್ತಿತರರಿದ್ದಾರೆ.
Published on

ವಿಜಯಪುರ: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಹತ್ಯೆಗೈದ ಕೊಲೆಗಡುಕರಿಗೆ ಗಲ್ಲು ಶಿೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದಿಂದ ಸೋಮವಾರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ$್ಮಣ ಕಂಭಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ ಮತ್ತು ಕೊಲೆಗಳು ಹೆಚ್ಚುತ್ತಿದ್ದು, ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ರಕ್ಷಣೆ ಇಲ್ಲದಿರುವುದೆ ಹುಬ್ಬಳ್ಳಿ ಟನೆ ಸಾಕ್ಷಿಯಾಗಿದೆ.

ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಹಾಡಹಗಲೆ ಚಾಕುವಿನಿಂದ ಇರಿದು ಕೊಲೆಮಾಡಿರುವುದು ಅತ್ಯಂತ ಖಂಡನೀಯ. ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿೆ ವಿಧಿಸುವಂತೆ ಅವರು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ, ಗಿರಿಶ ಕಲಟಗಿ, ಸಂಕೇತ ಪಟ್ಟಣದ, ಸಿದ್ರಾಮ ಹಳ್ಳೂರ, ಶೋಭಾ ಪಾಟೀಲ, ಕೇಸರಿ ನನಮ, ಚಂದ್ರಶೇಖರ ಕಡಕೋಳ, ಪ್ರಭು ಮಂಕಣಿ, ಮಲ್ಲಯ್ಯ ಹಿರೇಮಠ, ಶಿವು ಕುಂಬಾರ, ಬಸಲಿಂಗಪ್ಪ ಕಪಾಳಿ, ವೆಂಕಟೇಶ ಮರತಿಮನಿ, ಖಾಜಾಬಿನ ನದಾಫ, ಸಾಹೇಬಗೌಡ ಬಿರಾದಾರ, ಶಫೀಕ ಗಂಗನಳ್ಳಿ, ಮಹಾಂತೇಶ ತಳವಾರ, ಮಂಜೂರ ನಾಗರಬಾವಡಿ, ಸರ್ಫರಾಜ ಗಂಗನಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net