ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ

Hang Neha's murder accused
ಗುಳೇದಗುಡ್ಡದ ತಹಸೀಲ್ದಾರ್ ಮಂಗಳಾ ಎಂ. ಅವರಿಗೆ ನೇಹಾ ಹಿರೇಮಠ ಆರೋಪಿಸಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಮರಡಿಮಠದ ಶ್ರೀ ಕಾಡಸಿದ್ಧೇಶ್ವರ ಶ್ರೀಗಳು, ಜಂಗಮ ಸಮಾಜದ ಅಧ್ಯಕ್ಷ ಶಿವಾನಂದ ಮಳ್ಳಿಮಠ, ಮಹಾಂತಯ್ಯ ಸರಗಣಾಚಾರಿ, ಉಮೇಶ ಶಿವನಗೌಡರ ಇತರರಿದ್ದರು.
Published on

ಗುಳೇದಗುಡ್ಡ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಅಮಾನುಷವಾಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದಾಗ ಮಾತ್ರ ಮುಂದೆ ಇಂತಹ ಕ್ರೂರ ಘಟನೆಗಳು ಮುಂದೆ ನಡೆಯುವುದಿಲ್ಲ ಎಂದು ಶ್ರೀ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಠಾಧೀಶರು ತೀವ್ರವಾಗಿ ಆಗ್ರಹಿಸಿದ್ದಾರೆ.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಮಂಗಳಾ ಎಂ. ಅವರ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿ, ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಹತ್ಯೆಗೈದಿರುವುದು ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆ. ಲವ್ ಜಿಹಾದ್‌ಗೆ ಹಿಂದು ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಮುರುಘಾಮಠದ ಶ್ರೀ ಕಾಶಿನಾಥ ಶ್ರೀಗಳು, ಡಾ. ನೀಲಕಂಠ ಶ್ರೀಗಳು ಮಾತನಾಡಿ, ವಿದ್ಯಾರ್ಥಿನಿಯನ್ನು ಹೀನಾಯವಾಗಿ ಕೊಲೆ ಮಾಡಿದ ಯಾಜ್‌ನನ್ನು ಗುಂಡಿಕ್ಕಿ ಕೊಂದು ನೇಹಾಳ ಸಾವಿಗೆ ನ್ಯಾಯ ಒದಗಿಸಬೇಕು. ಇದು ವೈಯಕ್ತಿಕ ಕೊಲೆ ಎಂದು ಹೇಳಿಕೆ ನೀಡುವ ಸರ್ಕಾರ ನೇಹಾಳ ಸಾವಿಗೆ ಅನ್ಯಾಯ ಮಾಡಿದೆ. ಸರ್ಕಾರ ಕೊಲೆಗಡುಕರ ಪರ ಮಾತನಾಡುತ್ತಿದೆ. ಗೃಹ ಮಂತ್ರಿಗಳು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಮರಡಿಮಠದ ಶ್ರೀ ಕಾಡಸಿದ್ಧೇಶ್ವರ ಶ್ರೀಗಳು, ಜಂಗಮ ಸಮಾಜದ ಅಧ್ಯಕ್ಷ ಶಿವಾನಂದ ಮಳ್ಳಿಮಠ, ಮಹಾಂತಯ್ಯ ಸರಗಣಾಚಾರಿ, ಉಮೇಶ ಶಿವನಗೌಡರ, ನಿಜಗುಣಯ್ಯ ಹಿರೇಮಠ, ವಿಶ್ವನಾಥ ಹಿರೇಮಠ, ಪಡದಯ್ಯ ಕಕ್ಕನ್ನಯನಮಠ, ಈರಯ್ಯ ಚನಸಂಗಯ್ಯನಮಠ, ವೀರಭದ್ರಯ್ಯ ಹೊಸಮಠ, ಜಗದೀಶ ಸರಗಣಾಚಾರಿ, ಶಿವಕುಮಾರ ಸಾವಳಗಿಮಠ, ಸಂಗಯ್ಯ ಶಿವಪ್ಪಯ್ಯನಮಠ, ಎಂ.ಎಸ್. ಭಂಡಾರಿ, ಶ್ರೀಕಾಂತ ಸರಗಣಾಚಾರಿ, ಸಂಗಯ್ಯ ಗವಿಮಠ, ಶೇಖರಯ್ಯ ಜಂಗಮರ, ಬಸವರಾಜ ಸಿಂದಗಿಮಠ, ಶಿವು ತುಪ್ಪದ, ಮುತ್ತಣ್ಣ ಮೋತಿಮಠ, ಸಂಗಯ್ಯ ಸಿಂದಗಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net