ಗುಂಡ್ಮಿ ಶಾಲೆಗೆ ನೀರಿನ ಘಟಕ ಹಸ್ತಾಂತರ, ಹಂಗಾರಕಟ್ಟೆ ರೋಟರಿ ಕ್ಲಬ್‌ನಿಂದ ಕೊಡುಗೆ

WATER PLANT
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ಗುಂಡ್ಮಿ ಸರ್ಕಾರಿ ಪ್ರೌಢಶಾಲೆ 50 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ
Published on

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ಗುಂಡ್ಮಿ ಸರ್ಕಾರಿ ಪ್ರೌಢಶಾಲೆಗೆ 50 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರಿಸಲಾಯಿತು.

3182 ರೋಟರಿ ಜಿಲ್ಲೆಯ ವಲಯ 3ರ ಅಸಿಸ್ಟೆಂಟ್ ಗವರ್ನರ್ ಆಲ್ವಿನ್ ಕ್ವಾಡ್ರಸ್ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷ ಅರವಿಂದ ಶರ್ಮ ನೀರಿನ ಘಟಕವನ್ನು ಮುಖ್ಯಶಿಕ್ಷಕ ಕೆ.ಸತೀಶ್ ಐತಾಳರಿಗೆ ಹಸ್ತಾಂತರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಜಿ, ರಾಜಾರಾಂ ಐತಾಳ್, ಚಂದ್ರ ನಾಯರಿ, ಪಿ.ಚಂದ್ರಶೇಖರ ಹೊಳ್ಳ, ಯಶೋದಾ ಹೊಳ್ಳ, ಲೀಲಾವತಿ ಪೂಜಾರಿ, ಸುಲತಾ ಹೆಗ್ಡೆ, ಗಣೇಶ್ ಜಿ, ಶ್ರೀಪತಿ ಅಧಿಕಾರಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಕೆ.ಸತೀಶ್ ಐತಾಳ್ ಸ್ವಾಗತಿಸಿದರು. ಕ್ಲಬ್ ಕಾರ್ಯದರ್ಶಿ ಕರುಣಾಕರ ಶೆಟ್ಟಿ ವಂದಿಸಿದರು. ಶಿಕ್ಷಕಿ ಹೆಲೆನ್ ಬಾಂಜ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net