ಆಲಡ್ಕ ಶಾಲೆಗೆ ವಜ್ರ ರಥ 2ರ ಹಸ್ತಾಂತರ

vajra ratha
ಆಲಡ್ಕ ನೂಜಿ ಹಲುವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಜ್ರ ರಥ 2ನ್ನು ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಕಿನ್ಮಾನ್‌ಬೆಟ್ಟು ಇವರು ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಇವರಿಗೆ ಹಸ್ತಾಂತರಿಸಿದರು
Published on

ಕೊಕ್ಕರ್ಣೆ: ಆಲಡ್ಕ ನೂಜಿ ಹಲುವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘ, ಪಾಲಕರು, ದಾನಿಗಳ ಸಹಕಾರದಿಂದ ವಜ್ರ ರಥ 2ನ್ನು ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಕಿನ್ಮಾನ್‌ಬೆಟ್ಟು, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್‌ಗೆ ಹಸ್ತಾಂತರಿಸಿದರು.

ಉದ್ಯಮಿ ಸುರೇಶ್ ಶೆಟ್ಟಿ ತಡಾಲು, ದಾನಿಗಳಾದ ರಾಮದಾಸ ಪ್ರಭು ಆಲಡ್ಕ, ಹರೀಶ್ ಶೆಟ್ಟಿ ಕರ್ಜೆ, ದಯಾನಂದ ನಾಯ್ಕ ತಡಾಲು, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹರೀಶ್ ಶೆಟ್ಟಿ ಚೇರ್ಕಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚೇರ್ಕಾಡಿ ವಲಯಾಧ್ಯಕ್ಷ ಹರೀಶ್ ನಾಯ್ಕ ಹುಲಿಕಲ್, ಎಸ್‌ಡಿಎಂಸಿ ಅಧ್ಯಕ್ಷ ಸುರೇಂದ್ರ ನಾಯ್ಕ ನೂಜಿ, ಉಪಾಧ್ಯಕ್ಷೆ ಪೂರ್ಣಿಮಾ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಪ್ರಭು, ಶ್ರೀ ದುರ್ಗಾಪರಮೇಶ್ವರಿ ಜೋಡು ಗದ್ದುಗೆ ಅಮ್ಮನವರ ದೇವಸ್ಥಾನ ನೂಜಿ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯ್ಕ ನೂಜಿ, ಚೇರ್ಕಾಡಿ ವಲಯ ಶೌರ್ಯ ತಂಡದ ಅಧ್ಯಕ್ಷ ಸತೀಶ್ ನಾಯಕ್ ಕೊಂತ್ಯಾಳ, ಹಳೇ ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು, ಶಿಕ್ಷಕ ವೃಂದ, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ರವಿ ಎಸ್.ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಶಾಲಿನಿ ವಂದಿಸಿ, ಶಿಕ್ಷಕಿ ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net