ಪೇಜಾವರ ಶ್ರೀಗಳಿಂದ ಎರಡು ಮನೆ ಹಸ್ತಾಂತರ

udp-13-pejavara
Published on

ಉಡುಪಿ: ಶ್ರೀ ಪೇಜಾವರ ಮಠ ಹಾಗೂ ಆಸರೆ ಚಾರಿಟೇಬಲ್​ ಟ್ರಸ್ಟ್​ ಕಡಿಯಾಳಿ ಸಹಯೋಗದಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಮಿಸಿದ ಎರಡು ಮನೆಗಳನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶುಕ್ರವಾರ ಫಲಾನುಭವಿಗಳಾದ ಮಾಲಾಶ್ರೀ ಭಟ್​ ಮತ್ತು ಪ್ರತಿಮಾ ಪೂಜಾರ್ತಿ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ಈಗಾಗಲೇ ಶ್ರೀಮಠ , ಟ್ರಸ್ಟ್​ ಗಳು ಹಾಗೂ ದಾನಿಗಳ ನೆರವಿನಿಂದ ಅನೇಕ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಈ ಮುಖೇನ ಸಮಾಜದ ಅನೇಕರಿಗೆ ಸೂರು ನಿರ್ಮಿಸಿಕೊಟ್ಟು ಅವರ ಬಾಳಿನಲ್ಲಿ ನೆಮ್ಮದಿ ತರಬಲ್ಲ ಸಾರ್ಥಕ ಪ್ರಯತ್ನಗಳಿಂದ ಅತೀವ ಸಂತಸವಾಗಿದೆ ಎಂದರು.

ಆಸರೆ ಟ್ರಸ್ಟ್​ ಅಧ್ಯಕ್ಷ ಪಿ. ವಸಂತ ಭಟ್​ , ಸದಸ್ಯರಾದ ಎಂ. ವಲ್ಲಭ ಭಟ್​ ಟ್ರಸ್ಟ್​ನ ಕಾರ್ಯಗಳ ಬಗ್ಗೆ ವಿವರಿಸಿದರು. ದಾನಿಗಳಾದ ಉದ್ಯಮಿ ರಾಜಗೋಪಾಲ ಆಚಾರ್ಯ ದಂಪತಿ ಹಾಗೂ ಇಂಜಿನಿಯರ್​ ರಾಕೇಶ್​ ಜೋಗಿಯವರನ್ನು ಶ್ರೀಗಳು ಸನ್ಮಾನಿಸಿದರು. ನಗರಸಭಾಸದಸ್ಯ ಗಿರೀಶ್​ ಅಂಚನ್​ , ಸಂತೋಷ್​ ಕಿಣಿ , ರಾಮಚಂದ್ರ ಸನಿಲ್​ ಉಪಸ್ಥಿತರಿದ್ದರು. ವಾಸುದೇವ ಭಟ್​ ಪೆರಂಪಳ್ಳಿ ಹಾಗೂ ಸತೀಶ್​ ಕುಲಾಲ್​ ಕಾರ್ಯಕ್ರಮ ಸಂಯೋಜಿಸಿದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net